ಬೀದರನ ಗುರು ನಾನಕ್ ಜೀರಾ ಸಾಹಿಬ್ ಅಮೃತಸರ್​ನಲ್ಲಿರುವ ಸ್ವರ್ಣಮಂದಿರಕ್ಕೆ ಪರ್ಯಾಯ ಎನಿಸಿಕೊಂಡಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 20, 2021 | 6:20 PM

ಕೆಲವು ಹಿಂದೂ ದೇವಾಸ್ಥಾನಗಳಲ್ಲಿ ನಡೆಯುವ ಅನ್ನ ದಾಸೋಹ ಪದ್ಧತಿ ಇಲ್ಲೂ ಇದೆ. ಸಿಕ್ಖರು ಗುರು ಕಾ ಲಂಗರ್ ಎಂದು ಕರೆಯುವ ಸಮುದಾಯ ಅಡುಗೆ ಕೋಣೆಯಲ್ಲಿ ಅನ್ನ ದಾಸೋಹಕ್ಕೆ ಆಹಾರವನ್ನು ಸಿದ್ಧಪಡಿಸಲಾಗುತ್ತದೆ.

ಉತ್ತರ ಭಾರದಲ್ಲಿರುವ ಸಿಕ್ಖರಿಗೆ ಗುರುದ್ವಾರ ಮತ್ತು ಪವಿತ್ರ ಸ್ಥಳವೆಂದರೆ ಅಮೃತಸರನಲ್ಲಿರುವ ಸರ್ಣಮಂದಿರ. ಆದರೆ ದಕ್ಷಿಣ ಭಾರತದಲ್ಲಿರುವ ಅನೇಕ ಸಿಕ್ಖರು ಗುರುದ್ವಾರಕ್ಕೆ ಭೇಟಿ ನೀಡಬಯಸಿದರೆ ಅಮೃತಸರಕ್ಕೆ ಹೋಗೋದಿಲ್ಲ. ಆವರಿಗೆ ಕರ್ನಾಟಕದ ಬೀದರ್ನಲ್ಲಿ ಒಂದು ಗುರುದ್ವಾರವಿದೆ, ಅದನ್ನು ಈ ಸಮುದಾಯದವರು ಗುರು ನಾನಕ್ ಜೀರಾ ಸಾಹಿಬ್ ಎಂದು ಕರೆಯುತ್ತಾರೆ. ಪಂಜಾಬಿನ ಅಮೃತಸರ್ನಲ್ಲಿರುವ ಗುರುದ್ವಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಗುರು ನಾನಕ್ ಜೀರಾ ಸಾಹಿಬ್ ಗೆ ನೀಡಲಾಗುತ್ತದೆ. ಬೀದರ್ ನ ಗುರುದ್ವಾರವನ್ನು ರಮಣೀಯ ಪ್ರಕೃತಿ ಮಡಿಲಲ್ಲಿ ನಿರ್ಮಿಸಲಾಗಿದೆ. ಅತ್ಯಂತ ನೈಸರ್ಗಿಕ ಎನಿಸುವಂಥ ಸರೋವರವನ್ನು ಗುರದ್ವಾರ ಸಂಕೀರ್ಣದಲ್ಲಿ ಕಾಣಬಹುದು.

ಕೆಲವು ಹಿಂದೂ ದೇವಾಸ್ಥಾನಗಳಲ್ಲಿ ನಡೆಯುವ ಅನ್ನ ದಾಸೋಹ ಪದ್ಧತಿ ಇಲ್ಲೂ ಇದೆ. ಸಿಕ್ಖರು ಗುರು ಕಾ ಲಂಗರ್ ಎಂದು ಕರೆಯುವ ಸಮುದಾಯ ಅಡುಗೆ ಕೋಣೆಯಲ್ಲಿ ಅನ್ನ ದಾಸೋಹಕ್ಕೆ ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ಗುರುದ್ವಾರಕ್ಕೆ ಭೇಟಿ ನೀಡುವವರಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ದಂತಕತೆಯೊಂದರ ಪ್ರಕಾರ, ಸಿಖ್ ಧರ್ಮ ಸಂಸ್ಥಾಪಕರಾದ ಗುರು ನಾನಕ್ ಅವರು ಧರ್ಮ ಪ್ರಚಾರಕ್ಕಾಗಿ ಬೀದರ್ ಗೆ ಬಂದಾಗ ಅ ಪ್ರದೇಶ ಭೀಕರ ಬರದ ಪರಿಸ್ಥಿತಿಯಲ್ಲಿತ್ತು. ಅಲ್ಲಿನ ಜನರ ತಮ್ಮ ಗೋಳನ್ನು ಗುರು ನಾನಕ್ ಅವರಿಗೆ ಹೇಳಿಕೊಂಡಾಗ ಅವರು ಪವಾಡವೊಂದನ್ನು ಸೃಷ್ಟಿಸಿ ಕಲ್ಲು-ಬಂಡೆಗಳ ಬೆಟ್ಟದಲ್ಲಿ ನೀರು ಹರಿದು ಬರುವಂತೆ ಮಾಡಿದರಂತೆ.

ಆಗಿನಿಂದ ಇಂದಿನವರೆಗೆ ಇಲ್ಲಿ ಸ್ಫಟಿಕದಷ್ಟು ತಿಳಿ ಮತ್ತು ಶುದ್ಧವಾದ ನೀರು ಇಲ್ಲಿ ಹರಿಯುತ್ತದೆ. ಈ ನೀರನ್ನು ಕುಡಿದರೆ ಅನೇಕ ರೋಗಗಳು ವಾಸಿಯಾಗುತ್ತವೆ ಎಂದು ಹೇಳಲಾಗುತ್ತದೆ.

ಗುರುದ್ವಾರದಲ್ಲಿರುವ ಲಂಗರ್ ಹೊರತಾಗಿ ಬೇರೆ ಕೆಲ ನೋಡಲು-ಯೋಗ್ಯ ಸ್ಥಳಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಅಂದರೆ, ಸಿಖ್ ಮ್ಯೂಸಿಯಂ. ಸಿಖ್ ಸಮುದಾಯಕ್ಕೆ ಸಂಬಂಧಿಸಿದ ಪ್ರಮುಖ ಘಟನೆಗಳು, ಪ್ರಮುಖ ವ್ಯಕ್ತಿಗಳು ಮತ್ತು ಅವರು ಸಮುದಾಯಕ್ಕೆ ನೀಡಿದ ಕಾಣಿಕೆಗಳ ವಿವರ ಇಲ್ಲಿ ಸಿಗುತ್ತದೆ.

ಅಮೃತ್ ಕುಂಡ್-ಇದನ್ನು ಪವಿತ್ರ ಕೆರೆ ಎಂದು ಕರೆಯಲಾಗುತ್ತದೆ ಮತ್ತು ಸುತ್ತಮುತ್ತಲಿನ ನೀರಿನ ಮೂಲಗಳಿಂದ ಇಲ್ಲಿ ನೀರು ಸಂಗ್ರಹವಾಗುತ್ತದೆ. ಹಾಗೆಯೇ ಗುರುದ್ವಾರದಲ್ಲಿರುವ ಸುಖಾಸನ ಕೋಣೆಯಲ್ಲಿ ಸಿಕ್ಖರ ಪವಿತ್ರ ಗ್ರಂಥ ಗುರು ಗ್ರಂಥ್ ಸಾಹಿಬ್ ಇಡಲಾಗಿದೆ.

ಇದನ್ನೂ ಓದಿ:  ಮಲಗಿದ್ದ ಹೆಂಡತಿ ಮುಖಕ್ಕೆ ಕಪ್ಪು ಮಸಿ ಹಚ್ಚೋಕೆ ಮುಂದಾಗಿದ್ದ ಗಂಡನ ಅವಸ್ಥೆ ನೋಡಿ! ತಮಾಷೆ ವಿಡಿಯೋ ವೈರಲ್