ಜಿಮ್ ಟ್ರೈನರ್ ಜೊತೆ ಸೇರಿ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋದಲ್ಲಿ ಸಂಚು ಬಯಲು

Updated on: Oct 29, 2026 | 9:34 PM

ಆರೋಪಿ ಮಹಿಳೆ ಹಾಗೂ ಸ್ಥಳೀಯ ಜಿಮ್ ತರಬೇತುದಾರನ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಷಯ ಪತಿಗೆ ತಿಳಿದು ಗಲಾಟೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಪತಿಯನ್ನು ಕೊಲ್ಲಲು ಇಬ್ಬರೂ ಪ್ಲಾನ್ ರೂಪಿಸಿದ್ದರು. ಹತ್ಯೆ ನಡೆಯುವ ಮುನ್ನ ಏನೇನಾಯ್ತು ಎಂಬುದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಬೆಳಗಿನ ಜಾವ ಜಿಮ್​ಗೆ ಕಾರಿನಲ್ಲಿ ಹೊರಟ ಆ ಮಹಿಳೆ ಮನೆಯಿಂದ ಹೊರಟ ಕೂಡಲೆ ಅಲ್ಲಿಗೆ ಬಂದ ಆಕೆಯ ಪ್ರಿಯಕರ ಮನೆಯೊಳಗೆ ಹೋಗಿ ಕೊಲೆ ಮಾಡಿದ್ದಾನೆ. ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದವರು ಬಂದಾಗ ಆತ ಓಡಿಹೋಗಿದ್ದಾನೆ. ಆತನನ್ನು ಹಿಡಿಯಲು ಜನ ಓಡುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಜಿಯಾಬಾದ್, ಅಕ್ಟೋಬರ್ 29: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಲಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆ ಮಾಡಲು ಪತ್ನಿ ಹಾಗೂ ಆಕೆಯ ಪ್ರಿಯಕರ (ಜಿಮ್ ಟ್ರೈನರ್) ನಡೆಸಿದ್ದ ಸಂಚು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪತಿಯನ್ನು ಕೊಲೆ ಮಾಡಲು ಜಿಮ್ ಟ್ರೈನರ್ ಜೊತೆ ಸೇರಿ ಸುಪಾರಿ ನೀಡಿದ್ದ ಹಾಗೂ ಪ್ಲಾನ್ ರೂಪಿಸುತ್ತಿದ್ದ ಪತ್ನಿಯ ಪ್ರತಿಯೊಂದು ನಡೆಯೂ ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ಮಹಿಳೆ ಹಾಗೂ ಸ್ಥಳೀಯ ಜಿಮ್ ತರಬೇತುದಾರನ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಷಯ ಪತಿಗೆ ತಿಳಿದು ಗಲಾಟೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಪತಿಯನ್ನು ಕೊಲ್ಲಲು ಇಬ್ಬರೂ ಪ್ಲಾನ್ ರೂಪಿಸಿದ್ದರು. ಹತ್ಯೆ ನಡೆಯುವ ಮುನ್ನ ಏನೇನಾಯ್ತು ಎಂಬುದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಬೆಳಗಿನ ಜಾವ ಜಿಮ್​ಗೆ ಕಾರಿನಲ್ಲಿ ಹೊರಟ ಆ ಮಹಿಳೆ ಮನೆಯಿಂದ ಹೊರಟ ಕೂಡಲೆ ಅಲ್ಲಿಗೆ ಬಂದ ಆಕೆಯ ಪ್ರಿಯಕರ ಮನೆಯೊಳಗೆ ಹೋಗಿ ಕೊಲೆ ಮಾಡಿದ್ದಾನೆ. ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದವರು ಬಂದಾಗ ಆತ ಓಡಿಹೋಗಿದ್ದಾನೆ. ಆತನನ್ನು ಹಿಡಿಯಲು ಜನ ಓಡುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More