ಉತ್ತರ ಕರ್ನಾಟಕ ಸ್ಪೆಷಲ್ ಉದುರು ಸಜ್ಜಕ; ಸಿಹಿಯಾದ ಅಡುಗೆ ಇಷ್ಟಪಡುವವರು ಮಾಡಿ ಸವಿಯಿರಿ

ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ.


ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದಿನ ಅಡುಗೆ ಅದುವೆ ಉದುರು ಸಜ್ಜಕ.

ಉದುರು ಸಜ್ಜಕ ಮಾಡಲು ಬೇಕಾದ ಸಾಮಾಗ್ರಿಗಳು ರವೆ, ಕೊಬ್ಬರಿ ತುರಿ, ಏಲಕ್ಕಿ ಪುಡಿ, ತುಪ್ಪ, ಬೆಲ್ಲ, ದ್ರಾಕ್ಷಿ, ಬಾದಾಮಿ ಗೋಡಂಬಿ.

ಉದುರು ಸಜ್ಜಕ ಮಾಡುವ ವಿಧಾನ
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದರಲ್ಲಿ ರವೆಯನ್ನು ಹುರಿದು ತೆಗೆದಿಟ್ಟುಕೊಳ್ಳಬೇಕು. ಬಳಿಕ ಹಬೆಯಲ್ಲಿ ರವೆಯನ್ನು ಬೇಯಿಸಿಕೊಳ್ಳಬೇಕು. ( ಇಡ್ಲಿ ಪಾತ್ರದಲ್ಲಿ ಒಂದು ಲೋಟ ನೀರು ಹಾಕಿ ಅದರ ಮೇಲೆ ಒಂದು ತಟ್ಟೆ ಮುಚ್ಚಿ ಬಳಿಕ ಬಟ್ಟೆಯಲ್ಲಿ ರವೆಯನ್ನು ಹಾಕಿ ಗಂಟು ಕಟ್ಟಿ ಇಡಬೇಕು) ಬಳಿಕ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ಲ ಹಾಕಿ ಅದನ್ನು ನೀರು ಮಾಡಿ ಇಟ್ಟುಕೊಳ್ಳಬೇಕು. ನಂತರ ಅದನ್ನು ಸೋಸಿ ಇಟ್ಟುಕೊಳ್ಳಬೇಕು. ತುಪ್ಪದಲ್ಲಿ ದ್ರಾಕ್ಷಿ, ಬಾದಾಮಿ ಮತ್ತು ಗೋಡಂಬಿಯನ್ನು ಹುರಿದುಕೊಳ್ಳಬೇಕು. ಬಳಿಕ ಬೇಯಿಸಿದ ರವೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿ, ಬಳಿಕ ಬೆಲ್ಲದ ನೀರನ್ನು ಹಾಕಿ, ನಂತರ ತುಪ್ಪ ಹಾಕಿ, ಕೊಬ್ಬರಿ ತುರಿಯನ್ನು ಹಾಕಿ, ಬಳಿಕ ಏಲಕ್ಕಿ ಪುಡಿ, ಹುರಿದ ದ್ರಾಕ್ಷಿ, ಬಾದಾಮಿ ಮತ್ತು ಗೋಡಂಬಿಯನ್ನು ಹಾಕಿ ಕಲಸಿದರೆ ರುಚಿಯಾದ ಉದುರು ಸಜ್ಜಕ ಸವಿಯಲು ಸಿದ್ಧ.

ಇದನ್ನೂ ಓದಿ:

ನೇರಳೆ ಹಣ್ಣಿನ ಜ್ಯೂಸ್; ಆರೋಗ್ಯಯುತವಾದ ಈ ವಿಧಾನವನ್ನೊಮ್ಮೆ ಅನುಸರಿಸಿ ನೋಡಿ

ಮಾವಿನ ಹಣ್ಣಿನ ಓಟ್ಸ್ ಲಡ್ಡು; ಸರಳ ವಿಧಾನದೊಂದಿಗೆ ಮಾಡಿ ಸವಿಯಿರಿ