ಹೆಚ್ಚುತ್ತಿರುವ ತಾಪಮಾನದಿಂದ ಕರಗುತ್ತಿರುವ ಹಿಮ ಪ್ರದೇಶಗಳು ಭಾರತದ ಕಂಡಲಂಚಿನ ನಗರಗಳಿಗೆ ಅಪಾಯಕಾರಿಯಾಗಲಿವೆ: ವರದಿ
ಜಾಗತಿಕ ತಾಪಮಾನದ ಬಗ್ಗೆ ಸತತವಾಗಿ ಚರ್ಚೆಗಳಾಗುತ್ತಿವೆ. ವಿಶ್ವದೆಲ್ಲೆಡೆ ತಾಮಮಾನ ಪ್ರತಿವರ್ಷ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಿಮಾವೃತ ಪ್ರದೇಶಗಳಲ್ಲಿನ ಹಿಮ ಕ್ರಮೇಣ ಕರಗಾಲಾರಂಭಿಸಿ ನೀರಿನ ರೂಪ ತಳೆದು ಅದು ಸಮುದ್ರಗಳನ್ನು ಸೇರುತ್ತಿದೆ.
ಭಾರತೀಯರು ನಂಬಲು ಹಿಂಜರಿಯುವಂಥ ಸಂಗತಿ ಇದು. ಆದರೆ, ಕಳೆದ ಕೆಲ ದಶಕಗಳಿಂದ ವಿಷಯವನ್ನು ಅಧ್ಯಯನ ನಡೆಸುತ್ತಿರುವ ಅಮೆರಿಕ ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಸ್ಥೆ ನಾಸಾ ಅದನ್ನು ಹೇಳರಿವುದರಿಂದ ನಾವು ನಂಬಿ ಹೆದರಲೇ ಬೇಕು. ವಿಷಯವೇನೆಂದರೆ ಮುಂದಿನ 75-80 ವರ್ಷಗಳ ಅವಧಿಯಲ್ಲಿ ಕಡಲತೀರಕ್ಕಿರುವ ಭಾರತದ 12 ನಗರಗಳು ನೀರಿನಲ್ಲಿ ಮುಳುಗಡೆಯಾಗಲಿವೆ. ಈ ನಗರಗಳಲ್ಲಿ ನಮ್ಮ ಮಂಗಳೂರು ಸಹ ಸೇರಿದೆ. ಮುಳುಗಬಹುದಾದ ಇತರ ನಗರಗಳೆಂದರೆ, ಮುಂಬೈ, ಮರ್ಮಗೊವಾ, ವಿಶಾಖಪಟ್ಟಣಂ, ಕೊಚ್ಚಿ ಖದೀರ್ಪುರ್, ಚೆನೈ, ತೂತ್ತುಕುಡಿ, ಭಾವ ನಗರ, ಕಾಂಡ್ಲಾ, ಒಖಾ ಮತ್ತು ಪ್ಯಾರಾದೀಪ್.
ಜಾಗತಿಕ ತಾಪಮಾನದ ಬಗ್ಗೆ ಸತತವಾಗಿ ಚರ್ಚೆಗಳಾಗುತ್ತಿವೆ. ವಿಶ್ವದೆಲ್ಲೆಡೆ ತಾಮಮಾನ ಪ್ರತಿವರ್ಷ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಿಮಾವೃತ ಪ್ರದೇಶಗಳಲ್ಲಿನ ಹಿಮ ಕ್ರಮೇಣ ಕರಗಾಲಾರಂಭಿಸಿ ನೀರಿನ ರೂಪ ತಳೆದು ಅದು ಸಮುದ್ರಗಳನ್ನು ಸೇರುತ್ತಿದೆ. ಈ ಪ್ರಕ್ರಿಯೆ ಯಾವ ಸ್ಥಿತಿ ಉಂಟು ಮಾಡಲಿದೆಯೆಂದರೆ, ಸಮುದ್ರಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಾ ಹೋಗಿ ಕೊನೆಗೊಂದು ದಿನ ಕಡಲದ ತೀರದಲ್ಲಿರುವ ನಗರಗಳು ನೀರಾವೃತವಾಗಲಿವೆ.
ಅಧ್ಯಯನದ ಪ್ರಕಾರ ಪ್ರತಿ 7 ಇಲ್ಲವೇ 5 ವರ್ಷಗಳಿಗೊಮ್ಮೆ ಸಮುದ್ರಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಾ ಸಾಗಿ ಮತ್ತು 2100 ರ ಹೊತ್ತಿಗೆ ನೀರಿನ ಪ್ರಮಾಣ ಮೂರು ಅಡಿಗಳಷ್ಟು ವೃದ್ಧಿಯಾಗಲಿದೆ. ಸರ್ಕಾರಗಳು ಮತ್ತು ಸಂಬಂಧಪಟ್ಟ ಜಾಗತಿಕ ಸಂಸ್ಥೆಗಳು ಯಾವುದಾದರೊಂದು ಉಪಾಯ ಹುಡುಕುತ್ತಾರೆ ಎಂಬ ಭರವಸೆಯೊಂದಿಗೆ ನಾವು ಜೀವಿಸಬೇಕು.
ಇದನ್ನೂ ಓದಿ: ಪ್ರಶಾಂತ್ ನೀಲ್ ಕಣ್ಣು ತಪ್ಪಿಸಿ ಪ್ರಭಾಸ್ ವಿಡಿಯೋ ಲೀಕ್? ಸಲಾರ್ ಸೆಟ್ನಲ್ಲಿ ಕಿತಾಪತಿ