ಕ್ವಾಲಿಟಿ ನಿದ್ರೆಗಾಗಿ ಡಾ ಸೌಜನ್ಯ ವಶಿಷ್ಠ ಹಲವು ಉಪಾಯಗಳನ್ನು ತಿಳಿಸುತ್ತಾರೆ, ರಾತ್ರಿ 8 ಗಂಟೆಗೆಲ್ಲ ಡಿನ್ನರ್ ಮುಗಿದಿರಬೇಕಂತೆ!
ಮಲಗುವ ಮುನ್ನ ಬ್ರಶ್ ಇಲ್ಲವೇ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ. ಹಾಗೆಯೇ, ಹಾಸಿಗೆ ಮೇಲೆ ಒರಗುವ ಮುನ್ನ ಗ್ರ್ಯಾಟಿಟ್ಯೂಡ್ ಜನರಲ್ ಬರೆಯುವುದನ್ನು ಮಾಡಬೇಕು.
ಮನೋವೈದ್ಯೆ ಡಾ.ಸೌಜನ್ಯ ವಶಿಷ್ಠ ಅವರು ಇಂದಿನ ಸಂಚಿಕೆಯಲ್ಲಿ ಉತ್ತಮ ನಿದ್ರೆ ಮಾಡುವುದು ಹೇಗೆ ಅನ್ನವುದನ್ನು ವಿವರಿಸಿದ್ದಾರೆ. ನಿದ್ರೆ ನಮಗೆ ಬಹಳ ಮುಖ್ಯ, ನಿದ್ರಾಹೀನತೆ ನಮ್ಮನ್ನು ಅನಾರೋಗ್ಯಗಳಿಗೆ ಈಡುಮಾಡುತ್ತದೆ. ರಾತ್ರಿ ನಿದ್ರೆ ಸರಿಯಾಗದಿದ್ದರೆ, ಮರುದಿನ ಜಡತ್ವ ಮತ್ತು ಅನ್ಯಮನಸ್ಕತೆ ಕಾಡುತ್ತದೆ ಎಂದು ಆವರು ಹೇಳುತ್ತಾರೆ. ಕ್ವಾಲಿಟಿ ನಿದ್ರೆ ಮಾಡಬೇಕಾದರೆ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ. ರಾತ್ರಿಯೂಟ ಸ್ಕಿಪ್ ಮಾಡಲೇಬಾರದು ಆದರೆ ಮಲಗಲು ತೆರಳುವ 4-5 ಗಂಟೆಗಳ ಮುಂಚೆ ಡಿನ್ನರ್ ತಿಂದು ಬಿಡಬೇಕು. ಹಾಗೆಯೇ, ರಾತ್ರಿಯ ಊಟ ಹಿತಮಿತವಾಗಿರಬೇಕು ಯಾಕೆಂದರೆ, ಊಟದ ನಂತರ ನಾವು ಹೆಚ್ಚು ಓಡಾಡುವುದಿಲ್ಲವಾದ್ದರಿಂದ ತಿಂದಿದ್ದು ಜೀರ್ಣವಾಗೋದು ಕಷ್ಟವಾಗುತ್ತದೆ. ರಾತ್ರಿ 8 ಗಂಟೆಗೆ ಊಟ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು ಎಂದು ಹೇಳುವ ಸೌಜನ್ಯ ಮಾಂಸಾಹಾರ ಸೇವಿಸುವ ಹಾಗಿದ್ದರೆ, 5-6 ಗಂಟೆ ಮುಂಚೆ ಊಟಮಾಡಬೇಕು ಮತ್ತು ಹೆಚ್ಚು ಖಾರ ಅಥವಾ ಮಸಾಲೆಯುಕ್ತ ಊಟ ಸರಿಯಲ್ಲ ಅನ್ನುತ್ತಾರೆ.
ರಾತ್ರಿ ಮಲಗುವ ಒಂದು ಗಂಟೆ ಮೊದಲೇ ಫೋನ್, ಟ್ಯಾಬ್, ಲ್ಯಾಪ್ ಟಾಪ್ಗಳಿಂದ ದೂರವಾಗಬೇಕು ಎಂದು ಡಾ ಆಶ್ವಿನಿ ಹೇಳುತ್ತಾರೆ. ಮಲಗುವ ಮುನ್ನ ಒಳ್ಳೆ ವಿಚಾರಗಳನ್ನು ಮನಸಿನಲ್ಲಿ ತಂದುಕೊಳ್ಳಬೇಕು, ದಿನದಲ್ಲಿ ನಡೆದ ಒಳ್ಳೆಯ ಅಥವಾ ಮನಸ್ಸಿಗೆ ಮುದ ನೀಡುವ ಸಂಗತಿಗಳನ್ನು ಮೆಲಕು ಹಾಕಬೇಕು. ಹಾಸಿಗೆಗೆ ಒರಗಿದ ನಂತರ ಹಾರರ್ ಮೂವಿಗಳನ್ನು ಇಲ್ಲವೇ ಮನಸ್ಸಿಗೆ ಕಿರಿಕಿರಿ ಅನಿಸುವ ಧಾರಾವಾಹಿ, ಸಿನಿಮಾಗಳನ್ನು ನೋಡಬಾರದು. ಸ್ಲೀಪ್ ಡ್ರಿಂಕ್ ರೂಪದಲ್ಲಿ ಒಂದು ಲೋಟ ಹಾಲಿಗೆ ಚಿಟಿಕೆ ಅರಿಷಿಣ ಪುಡಿ ಸೇರಿಸಿ ಕುಡಿಯುವುದು ಒಳ್ಳೆಯದು ಅಂತ ಅವರು ಹೇಳುತ್ತಾರೆ.
ಮಲಗುವ ಮುನ್ನ ಬ್ರಶ್ ಇಲ್ಲವೇ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ. ಹಾಗೆಯೇ, ಹಾಸಿಗೆ ಮೇಲೆ ಒರಗುವ ಮುನ್ನ ಗ್ರ್ಯಾಟಿಟ್ಯೂಡ್ ಜನರಲ್ ಬರೆಯುವುದನ್ನು ಮಾಡಬೇಕು. ಅಂದರೆ, ದಿನದಲ್ಲಿ ನಡೆದ ಉತ್ತಮ ಸಂಗತಿಗಳನ್ನು ಡೈರಿಯಲ್ಲೋ, ನೋಟ್ ಬುಕ್ನಲ್ಲೋ ಬರೆಯಬೇಕು ಎಂದು ಸೌಜನ್ಯ ಹೇಳುತ್ತಾರೆ.
ಗ್ರೌಂಡಿಂಗ್ ಟೆಕ್ನಿಕ್ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಫಲಿತಾಂಶ ನೀಎಉತ್ತದೆ ಅಂತ ಡಾ ಸೌಜನ್ಯ ಹೇಳುತ್ತಾರೆ. ಇದನ್ನು 5,4,3,2,1 ಟೆಕ್ನಿಕ್ ಅಂತ ಕರೆಯುತ್ತಾರೆ. ಮಲಗುವ ಮೊದಲು ಬೆಡ್ರೂಮಿನಲ್ಲಿರುವ 5 ವಸ್ತುಗಳನ್ನು ನಾವು ನೋಡಬೇಕಂತೆ, ಅದಾದ ಮೇಲೆ 4 ವಸ್ತುಗಳನ್ನು ಸ್ಪರ್ಶಿಸಬೇಕು, 3 ವಸ್ತು ಅಥವಾ 3 ಬಗೆಯ ಧ್ವನಿಗಳನ್ನು ಕೇಳಿಸಿಕೊಳ್ಳಬೇಕು, 2 ವಸ್ತುಗಳ ವಾಸನೆಯನ್ನು ಆಘ್ರಾಣಿಸಬೇಕು ಮತ್ತು 1 ವಸ್ತುವಿನ ಸ್ವಾದವನ್ನು ಆಸ್ವಾದಿಸಬೇಕು (ನೀರು ಇಲ್ಲವೇ ಹಾಲು) ಎಂದು ಡಾ ಸೌಜನ್ಯ ಹೇಳುತ್ತಾರೆ. ಈ ಉಪಾಯಗಳನ್ನು ಪಾಲಿಸಿದರೆ ಉತ್ತಮ ನಿದ್ರೆ ಮಾಡಬಹುದು ಅಂತ ಅವರು ಹೇಳುತ್ತಾರೆ.
ಇದನ್ನೂ ಓದಿ: ಜೋಗದ ಜುಳುಜುಳು ನಾದ: ಸಾವಿರಾರು ಕಂಠಗಳಿಂದ ಜೋಗದ ಝರಿಯಲಿ ಜೋಗದ ಸಿರಿ ಹಾಡಿನ ಕನ್ನಡ ಉತ್ಸವ, ವಿಡಿಯೋ ಇದೆ