ಪ್ರೀತಿಯನ್ನು ಯಾಚಿಸಬಾರದು ಅದನ್ನು ಕಮಾಂಡ್ ಮಾಡಬೇಕು ಅನ್ನುತ್ತಾರೆ ಡಾ ಸೌಜನ್ಯ ವಶಿಷ್ಠ

ನಮ್ಮಲ್ಲಿರದ ಅಂಶಗಳನ್ನು ನಾವು ಇಷ್ಟಪಡುವ ವ್ಯಕ್ತಿಯಲ್ಲಿ ಕಂಡುಕೊಂಡು ಅವನು/ಅವಳು ಬದುಕಿನಲ್ಲಿ ಬಂದರೆ ಅದು ಸಂಪೂರ್ಣಗೊಳ್ಳುತ್ತದೆ ಅಂತ ಅಂದುಕೊಳ್ಳವುದು ತಪ್ಪು. ಖುದ್ದು ನಾವೇ ಪರಿಪೂರ್ಣ ವ್ಯಕ್ತಿಯಾಗಿರಬೇಕು ಎಂದು ಸೌಜನ್ಯ ಹೇಳುತ್ತಾರೆ.

ನಮ್ಮ ಬದುಕಿನಲ್ಲಿ ಸಂಬಂಧಗಳು ಎಷ್ಟು ಮುಖ್ಯವೋ ಅವುಗಳನ್ನು ಕಾಪಾಡಿಕೊಳ್ಳುವುದು ಅದಕ್ಕಿಂತ ಮುಖ್ಯ. ಒಂದು ಸಂಬಂಧ ಬೆಳೆಯುವುದು ಮತ್ತು ಅದು ಗಟ್ಟಿಯಾಗುವುದು ಹೇಗೆ ಅನ್ನೋದನ್ನು ಡಾ ಸೌಜನ್ಯ ಈ ಸಂಚಿಕೆಯಲ್ಲಿ ಹೇಳಿದ್ದಾರೆ. ಕೆಲವು ಸಲ ನಮಗೆ ಇಂಥ ಅನುಭವಗಳು ಆಗುತ್ತವೆ. ಏನೆಂದರೆ, ನಾವು ಯಾರನ್ನೋ ತುಂಬಾ ಇಷ್ಟಪಡ್ತಾ ಇರ್ತೀವಿ ಆದರೆ ಆ ವ್ಯಕ್ತಿ ಮಾತ್ರ ನಮ್ಮ ಭಾವನೆಗಳಿಗೆ ಸೊಪ್ಪೇ ಹಾಕುವುದಿಲ್ಲ. ಪರಿಸ್ಥಿತಿ ಹಾಗಿರಬೇಕಾದರೆ ನಾವು ಅಂಥ ವ್ಯಕ್ತಿಯನ್ನು ನಮ್ಮೆಡೆ ಆಕರ್ಷಣೆ ಮಾಡಿಕೊಳ್ಳುವುದು ಹೇಗೆ ಅಂತ ಸೌಜನ್ಯ ಹೇಳಿದ್ದಾರೆ.

ಯಾವುದೇ ವ್ಯಕ್ತಿ ಸದಾ ಕಾರ್ಯಶೀಲನಾಗಿದ್ದರೆ, ಅವನಲ್ಲಿ ಪ್ರೌಢಿಮೆ ತಾನಾಗಿಯೇ ಮೂಡುತ್ತದೆ. ನೀವು ಬಹಳ ಬುದ್ಧಿವಂತರಾಗಿರಬೇಕು ಅಂತೇನಿಲ್ಲ. ಆದರೆ, ನೀವು ಮಾಡುತ್ತಿರುವ ಕೆಲಸದಲ್ಲಿ ಪ್ರಾವೀಣ್ಯತೆ ಹೊಂದಿದ್ದರೆ, ಅದು ಬೇರೆಯವರು ನಿಮ್ಮೆಡೆ ಆಕರ್ಷಿತರಾಗುವಂತೆ ಮಾಡುತ್ತದೆ. ಅದರ ಜೊತೆಗೆ ನಮ್ಮಲ್ಲಿ ಒಳ್ಳೆ ಹವ್ಯಾಸಗಳಿರಬೇಕೆಂದು ಸೌಜನ್ಯ ಹೇಳುತ್ತಾರೆ. ನಮ್ಮಲ್ಲಿರದ ಅಂಶಗಳನ್ನು ನಾವು ಇಷ್ಟಪಡುವ ವ್ಯಕ್ತಿಯಲ್ಲಿ ಕಂಡುಕೊಂಡು ಅವನು/ಅವಳು ಬದುಕಿನಲ್ಲಿ ಬಂದರೆ ಅದು ಸಂಪೂರ್ಣಗೊಳ್ಳುತ್ತದೆ ಅಂತ ಅಂದುಕೊಳ್ಳವುದು ತಪ್ಪು. ಖುದ್ದು ನಾವೇ ಪರಿಪೂರ್ಣ ವ್ಯಕ್ತಿಯಾಗಿರಬೇಕು ಎಂದು ಸೌಜನ್ಯ ಹೇಳುತ್ತಾರೆ.

ಪ್ರೀತಿಯನ್ನು ಬೆಗ್ ಮಾಡಬಾರದು ಅದನ್ನು ಕಮಾಂಡ್ ಮಾಡಬೇಕು ಎಂದು ಆವರು ಹೇಳುತ್ತಾರೆ. ಪ್ರೇಮಯಾಚನೆ ನಮ್ಮ ವ್ಯಕ್ತಿತ್ವವನ್ನು ಕುಗ್ಗಿಸುತ್ತದೆ. ಪ್ರೀತಿ-ಪ್ರೇಮ ಅಂತ ನೀವು ಬೇರೆಯವರ ಹಿಂದೆ ದುಂಬಾಲು ಬಿದ್ದರೆ ನಮಗೆ ಬೆಲೆಯಿರುವುದಿಲ್ಲ. ಬೇರೆಯವರು ಪ್ರೀತಿ ಕೇಳಿಕೊಂಡು ನಮ್ಮಲ್ಲಿಗೆ ಬರಬೇಕು.

ಅದಕ್ಕಾಗಿ ಅಗಲೇ ಹೇಳಿದಂತೆ ನೀವು ಪರಿಪೂರ್ಣ ವ್ಯಕ್ತಿಯಾಗಿರುವ ಜೊತೆ ದಯಾಳು ಕೂಡ ಆಗಿರಬೇಕು. ದಯಾಳುತನದ ಗುಣ ಬೇರೆಯವರ ಮೇಲೆ ಪ್ರಭಾವ ಬೀರುತ್ತದೆ. ಇತರರಿಗೆ ಸಹಾಯ ಮಾಡುವ ಮನೋಭಾವ ನಿಮ್ಮಲಿದ್ದರೆ ಅದು ಎದುರಿನವರಿಗೆ ಪಾಸಿಟಿವ್ ವೈಬ್ಗಳನ್ನು ರವಾನೆ ಮಾಡುತ್ತದೆ.

ನಮ್ಮ ಬದುಕಿನ ಉದ್ದೇಶಗಳಲ್ಲಿ ಒಬ್ಬ ಉತ್ತಮ ಸಂಗಾತಿಯನ್ನು ಪಡೆಯುವುದು ಸಹ ಆಗಿರುತ್ತದೆ. ಜೀವನದ ಪಯಣದಲ್ಲಿ ಸಂಬಂಧಗಳು ಸರಿಯಾಗಿರಬೇಕಾದರೆ ನಮ್ಮ ಗುಣಗಳು ಚೆನ್ನಾಗಿರಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ:    ಮೈಸೂರಿನಲ್ಲಿ ಸೇತುವೆಯಿಂದ ನದಿಗೆ ಹಾರಿದ ಯುವತಿಯ ರಕ್ಷಣೆ! ವಿಡಿಯೋ ವೈರಲ್

Click on your DTH Provider to Add TV9 Kannada