Drone Man: ಲಖನೌದ ಈ ರೊಬೋಟಿಕ್ ವಿಜ್ಞಾನಿ ರಾಷ್ಟ್ರಪತಿಗಳಾಗಿದ್ದ ಎಪಿಜೆ ಅಬ್ದುಲ್ ಕಲಾಂರಿಂದ ಡ್ರೋಣ್ ಮ್ಯಾನ್ ಎಂದು ಹೊಗಳಿಸಿಕೊಂಡಿದ್ದರು!
ನೈಸರ್ಗಿಕ ಮತ್ತು ಮಾನವ ಕಲ್ಪಿತ ವಿಕೋಪಗಳು ಎದುರಾದಾಗಲೂ ಡ್ರೋಣ್ಗಳನ್ನು ಬಳಸಬಹುದು. ಎಕ್ಸಿಬಿಶನ್ ಒಂದರಲ್ಲಿ ಮಿಲಿಂದ್ ತಮ್ಮ ಡ್ರೋಣ್ ಗಳ ಉಪಯೋಗಗಳ ಪೈಕಿ ಒಂದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಂದೆಯೂ ಪ್ರದರ್ಶಿಸಿದ್ದಾರೆ.
ಲಖನೌ: ಮಿಸೈಲ್ ಮ್ಯಾನ್ ಎಂದು ಖ್ಯಾತರಾಗಿದ್ದ ಭಾರತದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಅವರು ಲಖನೌ ನಗರದ ಮಿಲಿಂದ್ ರಾಜ್ (Milind Raj) ಅವರನ್ನು ಭಾರತದ ‘ಡ್ರೋನ್ ಮ್ಯಾನ್’ (Drone Man) ಅಂತ ಸುಮ್ಮನೆ ಕರೆದಿರಲಿಲ್ಲ. ವೃತ್ತಿಯಿಂದ ರೊಬೊಟಿಕ್ ವಿಜ್ಞಾನಿಯಾಗಿರುವ ಮಿಲಿಂದ್ ಡ್ರೋನ್ ತಯಾರಿಕೆಯಲ್ಲಿ ತೊಡಗಿದ್ದು ಅವರ ಉಪಕರಣಗಳನ್ನು ರಕ್ಷಣಾ ವಲಯವೂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉಪಯೋಗಿಸಲ್ಪಡುತ್ತಿವೆ.
‘ನಾನು ತಯಾರಿಸುವ ಡ್ರೋಣ್ ಗಳು ಅಪಾರ ಬುದ್ಧಿಮತ್ತೆಯನ್ನು ಪ್ರದರ್ಶಿಸುವುದರ ಜೊತೆಗೆ ಹೆಚ್ಚು ಭಾರ ಹೊರುವ ಸಾಮರ್ಥ್ಯ ಹೊಂದಿದ್ದು ಅನೇಕ ಚಟುವಟಿಕೆಗಳಿಗೆ ಉಪಯೋಗಿಸಬಹುದಾಗಿದೆ. ಅವು ಅಪಾಯಕಾರಿಯೂ ಹೌದು ಮತ್ತು ಆಯುಧಗಳನ್ನು ಒಂದು ಕಡೆಯಿಂದ ಮತ್ತೊದು ಕಡೆಗೆ ಸಾಗಿಸಲೂಬಹುದು. ಸೇನೆಗೆ ಔಷಧಿಗಳನ್ನು ಸರಬರಾಜು ಮಾಡುವ ಮೂಲಕ ಅವು ಜೀವರಕ್ಷಕವಾಗಿಯೂ ಕೆಲಸ ಮಾಡುತ್ತವೆ,’ ಎಂದು ಮಿಲಿಂದ್ ರಾಜ್ ಹೇಳುತ್ತಾರೆ.
ತಾವು ತಯಾರಿಸುವ ಡ್ರೋಣ್ಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಮಿಲಿಂದ್ ಅವಿರತವಾಗಿ ಶ್ರಮಿಸುತ್ತಾರೆ.
‘ನಾವು 40 ಕೇಜಿಗಳಷ್ಟು ಭಾರ ಹೊರುವ ಡ್ರೋಣ್ ಗಳನ್ನು ವಿನ್ಯಾಸಗೊಳಿಸಿದ್ದೇವೆ, ಅದರೆ, ನಮ್ಮ ಗುರಿ 200 ಕೇಜಿಗಳಷ್ಟು ಬಾರ ಹೊರುವ ಡ್ರೋಣ್ ತಯಾರಿಸುವುದಾಗಿದೆ. ವ್ಯಕ್ತಿಯೊಬ್ಬ ಅದರಲ್ಲಿ ತೆರಳಿ ಮಿಶನ್ ಒಂದನ್ನು ಪೂರ್ತಿಗಳಿಸಿ ವಾಪಸ್ಸು ಬರವಷ್ಟು ಕ್ಷಮತೆಯ ಡ್ರೋಣ್ ತಯಾರಿಸುವೆಡೆ ನಮ್ಮ ಗಮನ ಕೇಂದ್ರೀಕರಿಸಿದ್ದೇವೆ,’ ಎಂದು ಮಿಲಿಂದ್ ಹೇಳುತ್ತಾರೆ.
ರೈತರ ಸಲುವಾಗಿಯೇ ಪ್ರತ್ಯೇಕವಾದ ಡ್ರೋಣ್ ಗಳನ್ನು ಮಿಲಿಂದ್ ವಿನ್ಯಾಸಗೊಳಿಸಿದ್ದಾರೆ.
ಇದನ್ನೂ ಓದಿ: ಮಲಯಾಳಂನಲ್ಲಿ ಸ್ತ್ರೀಲಿಂಗ ಮಾತ್ರ ಬಳಸಿಕೊಂಡ ದೇಶದ ಮೊದಲ ಮಸೂದೆಗೆ ಕೇರಳ ಸರ್ಕಾರ ಅಂಗೀಕಾರ
‘ಡ್ರೋಣ್ ಗಳು ಕೃಷಿಕರಿಗೆ ವರದಾನವಾಗಿವೆ. ನಾವು ರೈತಾಪಿ ಸುಮುದಾಯಕ್ಕೆಂದೇ ವಿಶಿಷ್ಟವಾದ ಡ್ರೋಣ್ ಅಭಿವೃದ್ಧಿಗೊಳಿಸಿ ಅದಕ್ಕೆ ‘ಅಗ್ರಿಕಲ್ಚರ್ ಡ್ರೋಣ್’ ಅಂತ ಹೆಸರಿಟ್ಟಿದ್ದೇವೆ. ಇದು ಹಲವಾರು ಕೆಲಸಗಳನ್ನು ಮಾಡುತ್ತದೆ. ಮೊಟ್ಟಮೊದಲಮೆಯದಾಗಿ ಇದು ಬೆಳೆಗಳ ಮೇಲೆ ಕೀಟನಾಶಕಗಳನ್ನು ಬಹಳ ವೇಗವಾಗಿ ಮತ್ತು ಸಮರ್ಪಕವಾಗಿ ಸಿಂಪಡಿಸಬಲ್ಲದು. ಎರಡನೇಯದಾಗಿ ವಿಮೆಯನ್ನು ಕ್ಲೇಮ್ ಮಾಡುವಾಗ ಜಮೀನು ಅಳೆಯಲು ನೆರವಾಗುತ್ತದೆ. ಮೂರನೇಯದಾಗಿ ಬೆಳೆಗಳ ಮೇಲೆ ಮಿಡತೆಗಳ ಹಾವಳಿ ನಡೆದಾಗ ಕೀಟನಾಶಕದ ಮೂಲಕ ಅವುಗಳನ್ನು ನಾಶಮಾಡಲು ಡ್ರೋಣ್ ಅನ್ನು ಬಹಳ ಪರಿಣಾಮಕಾರಿಯಾಗಿ ಬಳಸಬಹುದು,’ ಎಂದು ಮಿಲಿಂದ್ ಹೇಳುತ್ತಾರೆ.
ನೈಸರ್ಗಿಕ ಮತ್ತು ಮಾನವ ಕಲ್ಪಿತ ವಿಕೋಪಗಳು ಎದುರಾದಾಗಲೂ ಡ್ರೋಣ್ಗಳನ್ನು ಬಳಸಬಹುದು. ಎಕ್ಸಿಬಿಶನ್ ಒಂದರಲ್ಲಿ ಮಿಲಿಂದ್ ತಮ್ಮ ಡ್ರೋಣ್ ಗಳ ಉಪಯೋಗಗಳ ಪೈಕಿ ಒಂದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಂದೆಯೂ ಪ್ರದರ್ಶಿಸಿದ್ದಾರೆ.
ಲಖನೌನಲ್ಲಿ ಕಟ್ಟನಡವೊಂದು ಕುಸಿದುಬಿದ್ದಾಗ ಜನರ ಪ್ರಾಣವುಳಿಸಲು ಮಿಲಿಂದ್ ತಯಾರಿಸಿದ ಉಪಕರಣವೊಂದು ನೆರವಾಗಿತ್ತು.
ಇದನ್ನೂ ಓದಿ: LAC: ಚೀನಾ ಗಡಿಯುದ್ದಕ್ಕೂ ಬಲ ಹೆಚ್ಚಿಸಿಕೊಳ್ಳುತ್ತಿರುವ ಭಾರತೀಯ ಸೇನೆ; ಆರ್ಟಿಲರಿ, ರಾಕೆಟ್, ಡ್ರೋಣ್ ನಿಯೋಜನೆ
‘ಜನೆವರಿ 24, 2023 ರಂದು ಲಖನೌ ನಗರದಲ್ಲಿ ಐಲಾಹ್ ಕಟ್ಟಡ ಕುಸಿಯಿತು. ಕಟ್ಟಡದ ಅವವೇಶಗಳ ನಡುವೆ ಸಿಕ್ಕಿಬಿದ್ದ ಅಥವಾ ನೆರವು ಯಾಚಿಸುತ್ತರಬಹುದಾದ ಜನರನ್ನು ಪತ್ತೆ ಮಾಡಲು ಎನ್ ಡಿಆರ್ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡಗಳಿಗೆ ಒಂದು ಉಪಕರಣವನ್ನು ಅಭಿವೃದ್ಧಿಪಡಿಸಿ ಕೊಟ್ಟಿದ್ದೆವು,’ ಎಂದು ಮಿಲಿಂದ್ ಹೇಳುತ್ತಾರೆ.
ಡ್ರೋಣ್ ಗಳಿಗಾಗಿ ಚೀನಾದ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಅಂತಿಮವಾಗಿ ಅದನ್ನು ಕೊನೆಗಾಣಿಸಲು ಮಿಲಿಂದ್ ಶ್ರಮಿಸುತ್ತಿದ್ದಾರೆ. ‘ತಂತ್ರಜ್ಞಾನವನ್ನು ಬಳಸಿ ಭಾರತವನ್ನು ಸ್ವಾವಲಂಬಿಯಾಗಿಸುವುದು ಮತ್ತು ಇನ್ನಷ್ಟು ಶಕ್ತಿಶಾಲಿ ರಾಷ್ಟ್ರವಾಗಿಸುವುದು ಮಿಲಿಂದ್ ಅವರ ಉದ್ದೇಶ ಮತ್ತು ಗುರಿಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ