ಉಡುಪಿ ಹತ್ತಿರದ ಉಚ್ಚಿಲಾನಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನ ಮೊಗವೀರ ಸಮದಾಯಕ್ಕಾಗಿಯೇ ಸ್ಥಾಪಿಸಲಾಯಿತು
ಮಹಾಲಕ್ಷ್ಮಿ ದೇವಾಲಯ ಅಸ್ತಿತ್ವಕ್ಕೆ ಬಂದ ಇತಿಹಾಸವನ್ನು ನೋಡಿದ್ದೇಯಾದರೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಳವಾಗಿರುವ ಮೊಗವೀರ ಸಮುದಾಯದ ಜನರಿಗೆ ಬಾರ್ಕೂರಿನ ದೇವಾಲಯಗಳಲ್ಲಿ ಪ್ರವೇಶ ನಿಷಿದ್ಧವಾಗಿತ್ತಂತೆ.
ನಮ್ಮ ನಾಡಿನಲ್ಲಿ ಸಿರಿದೇವತೆ ಮಹಾಲಕ್ಷ್ಮಿ ದೇವಸ್ಥಾನಗಳು ಅಪಾರ ಮತ್ತು ಎಲ್ಲ ದೇಗುಲಗಳು ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿರುವುದು ಅಷ್ಟೇ ಸತ್ಯ. ಅಂಥ ಲಕ್ಷ್ಮಿ ಗುಡಿಗಳಲ್ಲಿ ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಉಚ್ಚಿಲಾನಲ್ಲಿರುವ ಮಂದಿರವೂ ಒಂದು. ಈ ದೇಗುಲಕ್ಕೆ ಪ್ರತಿದಿನ ನೂರಾರ ಭಕ್ತರು ಭೇಟಿ ನೀಡುತ್ತಾರೆ. ಅಸಲಿಗೆ ಈ ಜಾಗವು ದೇವಸ್ಥಾನಗಳ ಸಂಕೀರ್ಣವಾಗಿದೆ. ಪ್ರತಿ ದಿಕ್ಕಿನಲ್ಲಿ ನಿಮಗೊಂದು ದೇವಸ್ಥಾನ ಸಿಗುತ್ತದೆ. ಲಕ್ಷ್ಮಿ ದೇವಸ್ಥಾನದ ಉತ್ತರ ಭಾಗದಲ್ಲಿ ಒಂದು ಸರೋವರವಿದ್ದು ಅದಕ್ಕೆ ಹೊಂದಿಕೊಂಡಂತೆ ವಾಸುಕಿ ದೇವಾಲಯವಿದೆ. ಪೂರ್ವಕ್ಕೆ ಮುಖ್ಯದ್ವಾರವಿದ್ದು ಅಲ್ಲೇ ಧ್ವಜಸ್ತಂಭವನ್ನು ನೆಡಲಾಗಿದೆ. ದಕ್ಷಿಣ ಭಾಗದಲ್ಲಿ ಭದ್ರಕಾಳಿ ಗುಡಿ ಮತ್ತು ಒಳಗಿನ ದೇವಾಲಯ ಸಂಕೀರ್ಣದ ನೈರುತ್ಯ ಭಾಗದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪ್ರಸನ್ನ ಗಣಪತಿ ಗುಡಿಯಿದೆ. ಹಾಗೆಯೇ, ಈಶಾನ್ಯ ಭಾಗಕ್ಕೆ ನೀವು ತುಳಸಿಕಟ್ಟೆಯನ್ನು ಕಾಣಬಹುದು.
ಮಹಾಲಕ್ಷ್ಮಿ ದೇವಾಲಯ ಅಸ್ತಿತ್ವಕ್ಕೆ ಬಂದ ಇತಿಹಾಸವನ್ನು ನೋಡಿದ್ದೇಯಾದರೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಳವಾಗಿರುವ ಮೊಗವೀರ ಸಮುದಾಯದ ಜನರಿಗೆ ಬಾರ್ಕೂರಿನ ದೇವಾಲಯಗಳಲ್ಲಿ ಪ್ರವೇಶ ನಿಷಿದ್ಧವಾಗಿತ್ತಂತೆ. ಅವರಿಗೆಂದೇ ಪ್ರತ್ಯೇಕವಾಗಿ ಉಚ್ಚಿಲಾನಲ್ಲಿ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯ ದೇವಸ್ಥಾನವನ್ನು 1957 ನಿರ್ಮಿಸಲಾಗಿದೆ.
ಅಲ್ಲಿಂದೀಚೆಗೆ ದೇವಾಲಯದ ಖ್ಯಾತಿ ಹೆಚ್ಚುತ್ತಾ ಬಂದು ಈಗ ನಾಡಿನ ಪ್ರಮುಖ ದೇವಸ್ಥಾನಗಲ್ಲಿ ಒಂದೆನಿಸಿಕೊಂಡಿದೆ. ಗರ್ಭಗುಡಿ ಮೇಲ್ಭಾಗವನ್ನು ತಾಮ್ರದ ತಗಡುಗಳಿಂದ ಮುಚ್ಚಿ ಒಳಭಾಗವನ್ನು ಪ್ರತ್ಯೇಕಿಸಿ ಮಹಾಲಕ್ಷ್ಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.
ಎಲ್ಲ ದೇವಾಲಯಗಳಂತೆ ಇಲ್ಲೂ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ ಮತ್ತು ಪ್ರತಿ ಶುಕ್ರವಾರದಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶನಿದೇವರ ಆರಾಧನೆ ನಡೆಯುತ್ತದೆ.
ಇದನ್ನೂ ಓದಿ: ‘ಭಜರಂಗಿ 2’ಗೆ ಗೆಲುವು ಸಿಗಲಿ ಎಂದು ಫ್ಯಾನ್ಸ್ ಹರಕೆ; ವಿಡಿಯೋ ಕಾಲ್ ಮಾಡಿ ಮಾತನಾಡಿದ ಶಿವರಾಜ್ಕುಮಾರ್