ಮಣ್ಣಲ್ಲಿ ಮಣ್ಣಾದ ಮೋಹನ್​ ಜುನೇಜ; ಇಲ್ಲಿದೆ ಅಂತ್ಯಕ್ರಿಯೆ ವಿಡಿಯೋ

ಚಿಕಿತ್ಸೆ ಫಲಕಾರಿ ಆಗದೇ ಶುಕ್ರವಾರ (ಮೇ 6) ರಾತ್ರಿ ಅವರು ನಿಧನರಾದರು. ಸಾಕಷ್ಟು ಮಂದಿ ಅವರ ಅಂತಿಮದರ್ಶನವನ್ನು ಪಡೆದರು. ಸಂಜೆ ವೇಳೆಗೆ ಅವರ ಅಂತ್ಯಕ್ರಿಯೆ ನಡೆದಿದೆ.

TV9kannada Web Team

| Edited By: Rajesh Duggumane

May 07, 2022 | 9:23 PM

​ಖ್ಯಾತ ನಟ ಮೋಹನ್​ ಜುನೇಜ ಅವರ (Mohan Juneja) ಅಂತ್ಯಸಂಸ್ಕಾರ ಇಂದು (ಮೇ 7) ಸಂಜೆ ನೆರವೇರಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಮೋಹನ್​ ಜುನೇಜ ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಶುಕ್ರವಾರ (ಮೇ 6) ರಾತ್ರಿ ಅವರು ನಿಧನರಾದರು. ಸಾಕಷ್ಟು ಮಂದಿ ಅವರ ಅಂತಿಮದರ್ಶನವನ್ನು ಪಡೆದರು. ಸಂಜೆ ವೇಳೆಗೆ ಅವರ ಅಂತ್ಯಕ್ರಿಯೆ (Mohan Juneja Funeral) ನಡೆದಿದೆ. ಪ್ರತಿಭಾವಂತ ಕಲಾವಿದನ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಮೋಹನ್​​ ಜುನೇಜ ಅವರ ಕಣ್ಣುಗಳನ್ನು ದಾನ (Eye Donation) ಮಾಡಲಾಗಿದೆ. ಆ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಡಾ. ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​ ಸೇರಿದಂತೆ ಅನೇಕ ಕಲಾವಿದರು ಈ ವಿಚಾರದಲ್ಲಿ ಮಾದರಿ. ಅವರ ಸಾಲಿಗೆ ಮೋಹನ್​ ಜುನೇಜ ಕೂಡ ಸೇರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada