ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸಿಬ್ಬಂದಿ ಪಾನಮತ್ತರಾಗಿ ಕೆಲಸ ಮಾಡುತ್ತರೆ ಎಂದರು ಪ್ರಯಾಣಿಕರು!
ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವ ಟೆಕ್ನಿಶಿಯನ್ಗಳು ಪಾನಮತ್ತರಾಗಿ ಕೆಲಸಕ್ಕೆ ಬರುವುದರಿಂದ ಪ್ರಮಾದಗಳು ಜರುಗುತ್ತಿವೆ ಎನ್ನುತ್ತಾರೆ ಪ್ರಯಾಣಿಕರು. ಏರಪೋರ್ಟ್ ನಂಥ ಬಹುಮುಖ್ಯ ಸ್ಥಳದಲ್ಲಿ ಇಂಥ ಬೇಜವಾಬ್ದಾರಿ ಲ್ಯಾಬ್ ಗೆ ಹೊಣೆಗಾರಿಕೆ ವಹಿಸಿರುವುದು ಅಕ್ಷಮ್ಯ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಸೋಂಕಿನ ಟೆಸ್ಟ್ ಮಾಡಲು ನಿಯುಕ್ತಿಗೊಂಡಿರುವ ಔರಿಗಾ ರೀಸರ್ಷ್ ಪ್ರವೇಟ್ ಲಿಮಿಟೆಡ್ನಲ್ಲಿ (Auriga Research Private Limited ) ಕೆಲಸ ಮಾಡುವ ಟೆಕ್ನಿಶಿಯನ್ ಗಳು ಎಸಗುವ ಗುರುತರ ಪ್ರಮಾದಗಳ ವಿರುದ್ಧ ಪ್ರಯಾಣಿಕರು ಪದೇಪದೆ ದೂರು ಸಲ್ಲಿಸುತ್ತಿದರೂ ಏರ್ಪೋರ್ಟ್ ಪ್ರಾಧಿಕಾರವಾಗಲೀ (airport authority), ರಾಜ್ಯ ಅರೋಗ್ಯ ಇಲಾಖೆಯಾಗಲೀ (state health department ) ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರು ಎಂಥ ತಪ್ಪು ಮಾಡಿದ್ದಾರೆ ಅನ್ನೋದನ್ನು ಕೊಂಚ ಗಮನಿಸಿ. ದುಬೈಗೆ ತೆರಳಬೇಕಿದ್ದ ಒಬ್ಬ ಯುವಕನಿಗೆ ಅರ್ಟಿ-ಪಿಸಿಆರ್ ಟೆಸ್ಟ್ ನಡೆಸಿ ರಿಸಲ್ಟ್ ಪಾಸಿಟಿವ್ ಅಂತ ನೀಡಿದ್ದಾರೆ. ಆದರೆ ಆ ಯುವಕ ಬೇರೆ ಕಡೆ ಟೆಸ್ಟ್ ಮಾಡಿಸಿದಾಗ ಅವನಲ್ಲಿ ಸೋಂಕು ಪತ್ತೆಯಗದೆ ಫಲಿತಾಂಶ ನೆಗೆಟಿವ್ ಬಂದಿದೆ. ಆದರೆ, ಔರಿಗಾ ಲ್ಯಾಬ್ ನ ಪ್ರಮಾದಕರ ರಿಪೋರ್ಟ್ ಕಾರಣ ಅ ಯುವಕ ದುಬೈಗೆ ಪ್ರಯಾಣಿಸುವುದು ಸಾಧ್ಯವಾಗಲಿಲ್ಲ. ಅವನು ಕೆಲಸ ಮಾಡುತ್ತಿದ್ದು ನೌಕರಿಗೇನಾದರೂ ಸಂಚಕಾರ ಒದಗಿ ಬಂದರೆ ಅದಕ್ಕೆ ಯಾರು ಹೊಣೆ?
ಕಳೆದ ವಾರ ಒಬ್ಬ ಯುವತಿಯ ವಿಷಯದಲ್ಲೂ ಲ್ಯಾಬ್ ಟೆಕ್ನಿಶಿಯನ್ ಗಳಿಂದ ಇಂತದ್ದೇ ಅಚಾತುರ್ಯ ನಡೆದಿತ್ತು. ಆಕೆಗೆ ಸೋಂಕಿಲ್ಲದಿದ್ದರೂ ಪಾಸಿಟಿವ್ ರಿಪೋರ್ಟ್ ನೀಡಲಾಗಿತ್ತು. ಯುವತಿ ದೂರುಗಳನ್ನು ಸಲ್ಲಿಸದರೂ ಪ್ರಯೋಜನವಾಗಲಿಲ್ಲ.
ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವ ಟೆಕ್ನಿಶಿಯನ್ಗಳು ಪಾನಮತ್ತರಾಗಿ ಕೆಲಸಕ್ಕೆ ಬರುವುದರಿಂದ ಪ್ರಮಾದಗಳು ಜರುಗುತ್ತಿವೆ ಎನ್ನುತ್ತಾರೆ ಪ್ರಯಾಣಿಕರು. ಏರಪೋರ್ಟ್ ನಂಥ ಬಹುಮುಖ್ಯ ಸ್ಥಳದಲ್ಲಿ ಇಂಥ ಬೇಜವಾಬ್ದಾರಿ ಲ್ಯಾಬ್ ಗೆ ಹೊಣೆಗಾರಿಕೆ ವಹಿಸಿರುವುದು ಅಕ್ಷಮ್ಯ.
ಪ್ರಯಾಣಿಕರ ದೂರುಗಳಿಗೂ ಬೆಲೆ ಇಲ್ಲ ಅಂತಾದರೆ, ಕೇವಲ ಲ್ಯಾಬನ್ನು ಕಟಕಟೆಯಲ್ಲಿ ನಿಲ್ಲಿಸಲಾಗದು. ದೂರುಗಳನ್ನು ಅಸಡ್ಡೆ ಮಾಡುತ್ತಿರುವವರು ಸಹ ಅಷ್ಟೇ ತಪ್ಪಿತಸ್ಥರು.
ಇದನ್ನೂ ಓದಿ: ವಿದೇಶಗಳಿಂದ ಬಂದವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಅಗತ್ಯವಿಲ್ಲ