AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಾಜಸ್ಥಾನ: ಪ್ರಾರ್ಥನೆ ವೇಳೆ ಶಾಲೆಯ ಮೇಲ್ಛಾವಣಿ ಕುಸಿತ, ಅವಶೇಷಗಳಡಿ ಸಿಲುಕಿ ಒದ್ದಾಡುತ್ತಿರುವ ಮಕ್ಕಳು

Video: ರಾಜಸ್ಥಾನ: ಪ್ರಾರ್ಥನೆ ವೇಳೆ ಶಾಲೆಯ ಮೇಲ್ಛಾವಣಿ ಕುಸಿತ, ಅವಶೇಷಗಳಡಿ ಸಿಲುಕಿ ಒದ್ದಾಡುತ್ತಿರುವ ಮಕ್ಕಳು

ನಯನಾ ರಾಜೀವ್
|

Updated on: Jul 25, 2025 | 9:38 AM

Share

ರಾಜಸ್ಥಾನದ ಝಲಾವರ್ ಜಿಲ್ಲೆಯ ಪಿಪ್ಲೋಡಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಹಲವು ಮಕ್ಕಳು ಅವಶೇಷಗಳಡಿ ಸಿಲುಕಿದ್ದಾರೆ. ಸರ್ಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಹಠಾತ್ತನೆ ಕುಸಿದು ಬಿದ್ದಿದ್ದು, ಶಾಲಾ ಆವರಣದಲ್ಲಿ ಅವ್ಯವಸ್ಥೆ ಉಂಟಾಗಿದೆ. ಪ್ರಾರ್ಥನಾ ಸಭೆಯ ಸಮಯದಲ್ಲಿ ಸಂಭವಿಸಿದ ಈ ಘಟನೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಸ್ಥಾನ, ಜುಲೈ 25: ರಾಜಸ್ಥಾನದ ಝಲಾವರ್ ಜಿಲ್ಲೆಯ ಪಿಪ್ಲೋಡಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಹಲವು ಮಕ್ಕಳು ಅವಶೇಷಗಳಡಿ ಸಿಲುಕಿದ್ದಾರೆ. ಸರ್ಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಹಠಾತ್ತನೆ ಕುಸಿದು ಬಿದ್ದಿದ್ದು, ಶಾಲಾ ಆವರಣದಲ್ಲಿ ಅವ್ಯವಸ್ಥೆ ಉಂಟಾಗಿದೆ. ಪ್ರಾರ್ಥನಾ ಸಭೆಯ ಸಮಯದಲ್ಲಿ ಸಂಭವಿಸಿದ ಈ ಘಟನೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಸಿಬಿ ಸಹಾಯದಿಂದ ಅವಶೇಷಗಳನ್ನು ತೆಗೆದುಹಾಕುವ ಕಾರ್ಯ ನಡೆಯುತ್ತಿದೆ, ಗಾಯಗೊಂಡ ಮಕ್ಕಳನ್ನು ಮನೋಹರ್ಥಾನ ಸಿಎಚ್‌ಸಿಗೆ ಕರೆತರಲಾಗುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ