Samantha Akkineni : ಆಟೋ ಚಾಲಕಿ ಕವಿತಾ ಗೆ 12 ಲಕ್ಷ ರೂ. ಕಾರು ಕೊಡಿಸಿದ ನಟಿ ಸಮಂತಾ…!

ಸೌತ್ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಕೇವಲ ತನ್ನ ನಟನೆಯಿಂದ ಮಾತ್ರವಲ್ಲದೇ ತಮ್ಮ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಲೋಕೋಪಕಾರಿ ಕೆಲಸದ ಮೂಲಕ ತಮ್ಮ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹೌದು, ಸಾಂಕ್ರಾಮಿಕ ರೋಗದಿಂದಾಗಿ ಬಡತನದೊಂದಿಗೆ ಹೋರಾಡುತ್ತಿದ್ದ ಒಬ್ಬ ಮಹಿಳಾ ಆಟೋ ಡ್ರೈವರ್‌ಗೆ ನಟಿ ಸಮಂತಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ಹರಿದಾಡುತ್ತಿವೆ.

  • TV9 Web Team
  • Published On - 1:36 AM, 23 Apr 2021

 

ಸೌತ್ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಕೇವಲ ತನ್ನ ನಟನೆಯಿಂದ ಮಾತ್ರವಲ್ಲದೇ ತಮ್ಮ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಲೋಕೋಪಕಾರಿ ಕೆಲಸದ ಮೂಲಕ ತಮ್ಮ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹೌದು, ಸಾಂಕ್ರಾಮಿಕ ರೋಗದಿಂದಾಗಿ ಬಡತನದೊಂದಿಗೆ ಹೋರಾಡುತ್ತಿದ್ದ ಒಬ್ಬ ಮಹಿಳಾ ಆಟೋ ಡ್ರೈವರ್‌ಗೆ ನಟಿ ಸಮಂತಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ಹರಿದಾಡುತ್ತಿವೆ. ಅಂದಹಾಗೆ, ಆಟೋ ಚಾಲಕಿ ಕವಿತಾ ಈ ವರ್ಷದ ಆರಂಭದಲ್ಲಿ ನಟಿ ಸಮಂತಾ ಅವರ ಟಾಕ್ ಶೋನ ಸೆಟ್‌ಗೆ ಭೇಟಿ ನೀಡಿದ್ದರು. ಅವರು ತಾವು ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗಿರುವ ಬಗ್ಗೆ ಮತ್ತು ಜೀವನದ ಕಷ್ಟ ಸುಖಃಗಳನ್ನು ಹಂಚಿಕೊಂಡಿದ್ದರು. ಆಟೋ ಚಾಲಕಿ ಕವಿತಾ ಗೆ 12 ಲಕ್ಷ ರೂ. ಕಾರು ಕೊಡಿಸಿದ ನಟಿ ಸಮಂತಾ…!