‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ

Sanchari Vijay: ಸಂಚಾರಿ ವಿಜಯ್​ ಅವರ ನಿಧನದಿಂದ ಇಡೀ ಚಿತ್ರರಂಗಕ್ಕೆ ನೋವಾಗಿದೆ. ಅವರ ಬಗ್ಗೆ ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ ಅವರು ಮನದ ಮಾತು ಹಂಚಿಕೊಂಡಿದ್ದಾರೆ.


‘ವಿಜಯ್​ ಅವರು ಪ್ರತಿಭಾವಂತ ಕಲಾವಿದರು. ಆದರೆ ಅವರಿಗೆ ಅಷ್ಟೊಂದು ಅವಕಾಶ ಇರಲಿಲ್ಲ. ಅಷ್ಟೊಂದು ಸಿನಿಮಾಗಳು ಕೂಡ ಇರಲಿಲ್ಲ. ಆ ಒಂದು ಹಂತವನ್ನು ನಾನು ಕೂಡ ಅನುಭವಿಸಿದ್ದೇನೆ. ನಿಮ್ಮ ಅಭಿನಯ ಚೆನ್ನಾಗಿದೆ ಎಂದು ಜನರು ಹೇಳುತ್ತಾರೆ. ಆದರೆ ಅದಕ್ಕೆ ತಕ್ಕಂತೆ ಅವಕಾಶ ಸಿಗುವುದಿಲ್ಲ. ನೀವು ಒಳ್ಳೆಯ ಕಲಾವಿದರು ಆದರೆ ನಿಮ್ಮ ಮೇಲೆ ಅಷ್ಟೊಂದು ಬಂಡವಾಳ ಹಾಕೋಕೆ ಆಗಲ್ಲ ಎಂದು ಮಾರುಕಟ್ಟೆಯಲ್ಲೂ ಹೇಳ್ತಾರೆ. ಜೊತೆಗೆ ಸಾಕಷ್ಟು ಅವಮಾನ ಕೂಡ ಆಗುತ್ತದೆ. ಈ ದುಸ್ಥಿತಿ ಆದಷ್ಟು ಬೇಗ ನಿಲ್ಲಬೇಕು. ಬೇರೆ ಚಿತ್ರರಂಗದಿಂದ ನಾವು ಕಲಿಯುವ ಸಾಧ್ಯತೆ ಇದ್ದರೆ ಕಲಿಯೋಣ’ ಎಂದು ಅನಿರುದ್ಧ ಹೇಳಿದ್ದಾರೆ.

 

ಇದನ್ನೂ ಓದಿ:

ಗೆಳೆಯ ಸಂಚಾರಿ ವಿಜಯ್​ ಅಗಲಿಕೆ ನೋವಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ನೀನಾಸಂ ಸತೀಶ್​

ಸಂಚಾರಿ ವಿಜಯ್ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಉಚಿತವಾಗಿ ನೋಡಬಹುದು; ಇಲ್ಲಿದೆ ಲಿಂಕ್​