ಹರಿಯುವ ನದಿಯಲ್ಲಿ ಸಂಚಾರಿ ವಿಜಯ್​ ಸಾಹಸ; ‘ಮೇಲೊಬ್ಬ ಮಾಯಾವಿ’ ಚಿತ್ರದ ಮೇಕಿಂಗ್​ ವಿಡಿಯೋ

Melobba Maayavi: ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂಬುದು ನಟ ಸಂಚಾರಿ ವಿಜಯ್​ ಅವರ ಮುಖ್ಯ ಆಶಯ ಆಗಿತ್ತು. ಅದಕ್ಕಾಗಿ ಎಂಥ ರಿಸ್ಕ್​ ಬೇಕಿದ್ದರೂ ತೆಗೆದುಕೊಳ್ಳಲು ಅವರು ತಯಾರಾಗಿದ್ದರು.


ಪ್ರತಿಭಾವಂತ ಕಲಾವಿದ ಸಂಚಾರಿ ವಿಜಯ್​ ಅವರು ರಸ್ತೆ ಅಪಘಾತದಲ್ಲಿ ನಿಧನರಾಗುವುದಕ್ಕೂ ಮುನ್ನ ಅನೇಕ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಬೇರೆ ಬೇರೆ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಿದ್ದರು. ಸಿನಿಮಾಗಾಗಿ ಎಂಥ ರಿಸ್ಕ್​ ಬೇಕಿದ್ದರೂ ತೆಗೆದುಕೊಳ್ಳಲು ಅವರು ತಯಾರಾಗಿದ್ದರು. ಮೇಲೊಬ್ಬ ಮಾಯಾವಿ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಒಂದು ಘಟನೆಯೇ ಈ ಮಾತಿಗೆ ಸಾಕ್ಷಿ. ನವೀನ್​ ಕೃಷ್ಣ ನಿರ್ದೇಶನದ ಮೇಲೊಬ್ಬ ಮಾಯಾವಿ ಸಿನಿಮಾದ ಶೂಟಿಂಗ್​ ವೇಳೆ ಸಂಚಾರಿ ವಿಜಯ್​ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸಾಹಸ ಮಾಡಿದ್ದರು.

ಹರಿಯುವ ನೀರಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನದಿ ನೀರಿನ ಸುಳಿಯ ಪಕ್ಕದಲ್ಲೇ ಸಂಚಾರಿ ವಿಜಯ್​ ಅವರು ಶೀರ್ಷಾಸನ ಹಾಕಿದ್ದರು. ಅಪಾಯ ಕಣ್ಣೆದುರಿಗೆ ಇದ್ದರೂ ಕೂಡ ಅವರು ನದಿಯಲ್ಲಿ ಪಲ್ಟಿ ಹೊಡೆದಿದ್ದರು. ಸ್ವಲ್ಪವೇ ಹೆಚ್ಚು ಕಡಿಮೆ ಆಗಿದ್ದರೂ ಅಂದು ಅವರ ಪ್ರಾಣಕ್ಕೆ ಅಪಾಯ ಆಗುತ್ತಿತ್ತು. ಆ ದೃಶ್ಯದ ಶೂಟಿಂಗ್​ ವೇಳೆ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಚಿತ್ರೀಕರಣದ ವೇಳೆ ಏನಾಯ್ತು ಎಂಬುದನ್ನು ವಿವರಿಸುವಂತಹ ಮೇಕಿಂಗ್​ ವಿಡಿಯೋ ಈಗ ಲಭ್ಯವಾಗಿದೆ.

ಲಂಕೆ, ಅವಸ್ಥಾಂತರ, ಪಿರಂಗಿಪುರ, ಪುಕ್ಸಟ್ಟೆ ಲೈಫು, ತಲೆದಂಡ ಮುಂತಾದ ಸಿನಿಮಾಗಳು ಬಿಡುಗಡೆ ಆಗುವುದಕ್ಕೂ ಮುನ್ನವೇ ಸಂಚಾರಿ ವಿಜಯ್​ ಅವರು ಇಹಲೋಕ ತ್ಯಜಿಸಿದ್ದು ದುಃಖದ ಸಂಗತಿ.

ಇದನ್ನೂ ಓದಿ:

​ಸಂಚಾರಿ ವಿಜಯ್​ ಹೆಸರು ಬಳಸಿಕೊಂಡು ಪ್ರಚಾರ ಪಡೆದವರಿಗೆ ಸ್ನೇಹಿತ ವೀರೇಂದ್ರ ಮಲ್ಲಣ್ಣ ತಿರುಗೇಟು

ನಟ ಸಂಚಾರಿ ವಿಜಯ್​ಗೆ ಜಾತಿ ಭೇದ ಮಾಡಲಾಗಿತ್ತು ಎಂಬ ಆರೋಪ ಸುಳ್ಳು; ಸಹೋದರ ವಿರೂಪಾಕ್ಷ ಸ್ಪಷ್ಟನೆ