ಸಂಸತ್ ವಿಸರ್ಜಿಸಿ ಮತಪತ್ರ ಬಳಸಿ ಚುನಾವಣೆ ಮಾಡಿ ಎಂದಿದ್ದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್ ಸವಾಲು
ಸಂಸತ್ತು ವಿಸರ್ಜಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಸವಾಲು ಹಾಕಿದ್ದು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೇ ಮೊದಲು ಇದನ್ನು ಜಾರಿಗೊಳಿಸಿ ಎಂದಿದ್ದಾರೆ. ಕೇರಳದಲ್ಲಿ ಗೆದ್ದಾಗ EVM ಚೆನ್ನಾಗಿರುತ್ತೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಮಾತ್ರ ಇವಿಎಂ ಬೇಡ ಅಂತಾರೆ ಎಂದವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 30: ಸಂಸತ್ ವಿಸರ್ಜಿಸಿ ಮತಪತ್ರ ಬಳಸಿ ಚುನಾವಣೆಮಾಡಿ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದು, ನೀವು ಅಧಿಕಾರದಲ್ಲಿರುವ ರಾಜ್ಯದಲ್ಲೇ ಇದನ್ನು ಮಾಡೋಣ. ನಿಮಗೆ ತಾಕತ್ತಿದ್ದರೆ ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೆಲ್ಲಿ ಎಂದಿದ್ದಾರೆ. ಕರ್ನಾಟಕ, ತೆಲಂಗಾಣ, ಕೇರಳದಲ್ಲಿ ಗೆದ್ದಾಗ EVM ಚೆನ್ನಾಗಿರುತ್ತೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಮಾತ್ರ ಇವಿಎಂ ಬೇಡ ಅಂತಾರೆ. ಅದಕ್ಕೆ ನೀವೇ ಮಾದರಿ ಆಗಿಬಿಡಿ ಮಲ್ಲಿಕಾರ್ಜುನ ಖರ್ಗೆ ಅವರೇ ಎಂದು ಅಶೋಕ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 30, 2026 06:04 PM
Loading...
Unable to load recommendations.
Follow Us
