ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಪಾಲಬೋವಿದೊಡ್ಡಿ ಗ್ರಾಮದಲ್ಲಿ ಚಂದ್ರೇಗೌಡರ ಮನೆ ಬಳಿ ಕಾಣಿಸಿಕೊಂಡಿದ್ದ 10 ಅಡಿ ಉದ್ದದ ಹೆಬ್ಬಾವನ್ನು ಉರಗ ರಕ್ಷಕ ಶಶಿಕುಮಾರ್ ಯಶಸ್ವಿಯಾಗಿ ಸೆರೆಹಿಡಿದರು. ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಈ ಬೃಹತ್ ಹೆಬ್ಬಾವನ್ನು ನಂತರ ರಾಮನಗರದ ದೇವರಬೆಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಈ ಕಾರ್ಯಾಚರಣೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.