10 ಚಕ್ರದ ಲಾರಿಯೊಂದು ಏಕಾಏಕಿ ಹೊತ್ತಿ ಉರಿದಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಸೋಮನಹಳ್ಳಿ ಬಳಿ ನಡೆದಿದೆ. ಕನಕಪುರದಿಂದ ಬೆಂಗಳೂರು ಕಡೆ ಬರುತ್ತಿದ್ದ 10 ಚಕ್ರದ ಲಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಧಗಧಗ ಹೊತ್ತಿ ಉರಿದಿದೆ. ಸಂಬಳ ನೀಡದಿದ್ದರಿಂದ ಚಾಲಕನೇ ಲಾರಿಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.