ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಲವಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡ ನಂತರ ಸ್ಥಳೀಯರು ಭಯಭೀತರಾಗಿದ್ದರು. ಸುಮಾರು 16 ಅಡಿ ಉದ್ದದ ಈ ಹೆಬ್ಬಾವು ಮನೆಯೊಂದಕ್ಕೆ ನುಗ್ಗಿತ್ತು. ತಕ್ಷಣ ಸ್ಥಳಕ್ಕೆ ತಲುಪಿದ ಹಾವು ಹಿಡಿಯುವ ಸೂರಜ್ ಶೆಟ್ಟಿ, ಅರಬೈಲ್ ಮತ್ತು ಹರೀಶ್ ಮಡಿವಾಳ ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ಕಾರ್ಯಾಚರಣೆ ಆರಂಭಿಸಿದರು.