ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ನೀರು ಹಾಯಿಸುವಾಗ 2 ಚಿರತೆ ಮರಿಗಳು ಪತ್ತೆಯಾಗಿವೆ. ಬಂಡೀಪುರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಮರಿಗಳನ್ನು ಬೋನಿನಲ್ಲಿಟ್ಟು ತಾಯಿ ಚಿರತೆ ಸೆರೆಗೆ ಕಾರ್ಯಚರಣೆ ನಡೆಸಲಾಗುತ್ತಿದೆ. ತಾಯಿ ಸಿಗದಿದ್ದರೆ ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ಮರಿಗಳನ್ನು ಬಿಡಲು ತೀರ್ಮಾನಿಸಲಾಗಿದೆ. ಚಿರತೆ ಉಪಟಳದಿಂದ ಗ್ರಾಮಸ್ಥರು ನಿರಂತರ ಆತಂಕದಲ್ಲಿದ್ದಾರೆ.