ಇದನ್ನು ಸವಿಯದಿದ್ದರೆ ನಿಮ್ಮ ಬೇಸಿಗೆ ಅಪೂರ್ಣ. ಹೌದು ಹೆಚ್ಚಿನ ಪ್ರೋಟೀನ್ ಇರುವ ಕೇವಲ 5 ಪದಾರ್ಥಗಳನ್ನು ಬಳಸಿ 5 ನಿಮಿಷಗಳಲ್ಲಿ ತಯಾರಿಸಬಹುದಾದ ಚೀಸ್ಕೇಕ್ ಮಾಡಿ ಸವಿಯಲೇಬೇಕು. ಅದಲ್ಲದೆ ಯಾವುದೇ ರೀತಿಯ ಕ್ರೀಮ್ ಇಲ್ಲದೆಯೇ ಇದನ್ನು ಮಾಡಬಹುದಾದ್ದರಿಂದ ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರಿಗೂ ಕೊಡಬಹುದು. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ದಿನನಿತ್ಯ ಯಾವ ಡಿಶ್ ಮಾಡಿಕೊಡುವುದು ಎಂಬ ಗೊಂದಲವಿದ್ದಾಗ ಫಟಾಫಟ್ ಆಗಿ ತಯಾರಾಗುವ ಈ ಚೀಸ್ಕೇಕ್ ಮಾಡಿಕೊಡಬಹುದು ಇದನ್ನು ಸುಲಭವಾಗಿ ಮಾಡುವ ವಿಧಾನವನ್ನು ohyumness ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.