ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್ನಲ್ಲಿ ಭೀಕರ ಬೆಂಕಿ ಅನಾಹುತ ಸಂಭವಿಸಿದೆ. 7 ಎಲ್ಪಿಜಿ ಸಿಲಿಂಡರ್ಗಳು ಸ್ಪೋಟ, ಮುಗಿಲೆತ್ತರಕ್ಕೆ ಚಿಮ್ಮಿದ ಜ್ವಾಲೆಯ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಮುಲುಂಡ್ ಪ್ರದೇಶದಲ್ಲಿರುವ ಕಾರ್ಮಿಕರ ವಸತಿ ಶಿಬಿರದಲ್ಲಿ ಈ ಭೀಕರ ಬೆಂಕಿ ಅನಾಹುತ ಸಂಭವಿಸಿದೆ. ಬೆಂಕಿ ವೇಗವಾಗಿ ಹರಡಿದ ಪರಿಣಾಮ ಶಿಬಿರದಲ್ಲಿದ್ದ ಸಾಲು ಸಾಲು ಗುಡಿಸಲುಗಳು ಹೊತ್ತಿ ಉರಿದಿದ್ದು, ಈ ವೇಳೆ ಕನಿಷ್ಠ 7 ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ಗಳು ಸರಣಿ ಸ್ಪೋಟಗೊಂಡಿವೆ.