ಸೋಶಿಯಲ್ ಮೀಡಿಯಾಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಯುವಕ ನಡೆಯಲು ಸಾಧ್ಯವಾಗದ ತನ್ನ ಪ್ರೀತಿಯ ತಂಗಿಯನ್ನು ಎತ್ತಿಕೊಂಡು ಸಮುದ್ರದ ಅಲೆಗಳ ಹತ್ತಿರ ಹೋಗುತ್ತಾನೆ. ಅವಳು ವೀಲ್ಚೇರ್ನಲ್ಲಿ ಕುಳಿತುಕೊಂಡಿದ್ದರು. ಆಕೆಯ ಆಸೆಯನ್ನು ಈಡೇರಿಸುವುದು ಅವನ ಕನಸಾಗಿತ್ತು. ಅವಳ ಆ ಪುಟ್ಟ ಆಸೆಯನ್ನು ಪೂರೈಸಲು ಆ ಅಣ್ಣ ಅವಳನ್ನು ಎತ್ತಿಕೊಂಡು ನೀರಿನ ಹತ್ತಿರ ನಿಲ್ಲುತ್ತಾನೆ.