ಸಂಕ್ರಾತಿ ಹಬ್ಬದ ಸಂಭ್ರಮದಲ್ಲಿದ್ದವರಿಗೆ ಬೆಳ್ಳಂ ಬೆಳಿಗ್ಗೆ ಒಂಟಿ ಸಲಗ ಶಾಕ್ ಕೊಟ್ಟಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಮಾರಿಗುಡಿ ಬೀದಿಯಲ್ಲಿ ನಡೆದಿದೆ. ಕಾಡಿನಿಂದ ನಾಡಿಗೆ ಬಂದ ಆನೆ ಮಾರಿಗುಡಿ ಬೀದಿಯಲ್ಲಿ ಸಂಚರಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನ ಎತ್ತಿ ಬಿಸಾಕಿ, ಕಾಲಿನಲ್ಲಿ ತುಳಿದು ಜಖಂಗೊಳಿಸಿದೆ. ಒಂಟಿ ಸಲಗದ ಆಟಾಟೋಪದ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಕಾಡಾನೆ ರಣಾರ್ಭಟ ಕಂಡು ಗುಂಡ್ಲುಪೇಟೆ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.