ಪತಿಯ ಅತಿಯಾದ ಅನುಮಾನಕ್ಕೆ ಬೇಸತ್ತು ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಹೆಚ್.ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ. ಎಚ್ ಎಲ್ ಇಂದ್ರ(24) ಸಾವಿಗೆ ಶರಣಾದ ಮಹಿಳೆ. ವರದಕ್ಷಿಣೆ ಕಿರುಕುಳದ ಜೊತೆ ಪತ್ನಿಯ ಬಗ್ಗೆ ಅನುಮಾನದಿಂದ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.