ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ರೈತ ಸುನೀಲ್ ಅವರ ಜಮೀನಿನಲ್ಲಿ ಕೊರೆಸಿದ ಬೋರ್ವೆಲ್ನಲ್ಲಿ ಭಾರಿ ಪ್ರಮಾಣದ ಅಂತರ್ಜಲ ಪತ್ತೆಯಾಗಿದೆ. ಬರದ ನಡುವೆಯೂ ಒಣ ಭೂಮಿಯಲ್ಲಿ ಬಾನೆತ್ತರಕ್ಕೆ ಚಿಮ್ಮಿದ ಜಲಧಾರೆ, ಸುತ್ತಮುತ್ತಲ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಇದು ಕೃಷಿ ಚಟುವಟಿಕೆಗಳಿಗೆ ಜೀವ ತುಂಬಲಿದೆ.