ಕನ್ನಡದ ಖ್ಯಾತ ನಟಿ ಶೃತಿ ಅವರು ಮಂಗಳೂರಿನಲ್ಲಿ ಕೊರಗಜ್ಜನಿಗೆ ಹರಕೆಯ ಕೋಲ ಸಲ್ಲಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುತ್ರಿ ತಮ್ಮ ತಾಯಿ ಹಾಗೂ ಹಿರಿಯ ನಟಿಯರೊಂದಿಗೆ ಈ ಧಾರ್ಮಿಕ ವಿಧಿಯಲ್ಲಿ ಭಾಗವಹಿಸಿದ್ದರು. ಕೊರಗಜ್ಜನ ಕಾರ್ಣಿಕಕ್ಕೆ ಸಂಬಂಧಿಸಿದ ಸಿನಿಮಾದಲ್ಲೂ ನಟಿಸಿರುವ ಶೃತಿ ಅವರ ಈ ಭೇಟಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.