ಆಗ್ರಾದ ಮಹುವಾರ್ ಗ್ರಾಮದಲ್ಲಿ ಗಂಡಂದಿರ ಮದ್ಯವ್ಯಸನದಿಂದ ಬೇಸತ್ತ ಮಹಿಳೆಯರು ಒಟ್ಟಾಗಿ ಮದ್ಯದ ಅಂಗಡಿಯೊಂದಕ್ಕೆ ದಾಳಿ ನಡೆಸಿದ್ದಾರೆ. ಅಂಗಡಿಯಲ್ಲಿದ್ದ ಮದ್ಯದ ಬಾಟಲಿಗಳನ್ನು ಎಳೆದು ಹೊರಹಾಕಿ, ಧ್ವಂಸ ಮಾಡಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯರ ಆಕ್ರೋಶ ಸಮಾಜದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅವರ ಸಂಕಟವು ವ್ಯಾಪಕ ಗಮನ ಸೆಳೆದಿದೆ.