ಮೆಡಿಕಲ್ ಎಮರ್ಜೆನ್ಸಿ ವೇಳೆ ಸೇವೆ ನೀಡಲು ನೆರವಾಗಬಲ್ಲ ಡ್ರೋನ್ ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಏರ್ ಬಾಂಡ್ ಸಂಸ್ಥೆ ಪರಿಚಯಿಸಿದೆ. ನೂತನ ಮಾದರಿಯ ಡ್ರೋನ್ ಗಳ ಹಾರಾಟ ಪರೀಕ್ಷೆಯೂ ಯಶಸ್ವಿಯಾಗಿದ್ದು, ಸುಮಾರು 1 ಕೆ.ಜಿ.ಯಷ್ಟು ಭಾರವಿರುವ ಪರಿಕರಗಳನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಇವುಗಳಿಗಿವೆ.