ಚಾಮರಾಜನಗರದ ಅಜ್ಜಿಪುರ ಸಫಾರಿಯಲ್ಲಿ ಪ್ರವಾಸಿಗರಿಗೆ ಹುಲಿಗಳ ಇಡೀ ಕುಟುಂಬವೇ ದರ್ಶನ ನೀಡಿ ಸಂಭ್ರಮ ತಂದಿದೆ. ಒಂದೇ ಸ್ಥಳದಲ್ಲಿ ನಾಲ್ಕು ಹುಲಿಗಳನ್ನು ಕಂಡ ಪ್ರವಾಸಿಗರು ಪುಳಕಿತರಾಗಿದ್ದಾರೆ. ಇತ್ತೀಚೆಗೆ ಕರಿಚಿರತೆ, ಬಿಳಿ ಜಿಂಕೆ ಸಹ ಕಾಣಿಸಿಕೊಂಡಿದ್ದವು. ಈ ಅಪರೂಪದ ವನ್ಯಜೀವಿ ದರ್ಶನಗಳಿಂದಾಗಿ ಅಜ್ಜಿಪುರ ಮತ್ತು ಪಿ.ಜಿ. ಪಾಳ್ಯ ಸಫಾರಿ ಕೇಂದ್ರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.