ಮಹಾರಾಷ್ಟ್ರ ಮತ್ತು ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. 73,162 ಕ್ಯೂಸೆಕ್ ಒಳಹರಿವಿನ ಪರಿಣಾಮವಾಗಿ ಈ ವರ್ಷ ಮೊದಲ ಬಾರಿಗೆ ಆಲಮಟ್ಟಿ ಡ್ಯಾಂನ 26 ಗೇಟ್ಗಳಲ್ಲಿ 14 ಕ್ರಸ್ಟ್ ಗೇಟ್ಗಳನ್ನು ತೆರೆಯಲಾಗಿದೆ. 43,567 ಕ್ಯೂಸೆಕ್ ನೀರನ್ನು ಬಸವಸಾಗರಕ್ಕೆ ಬಿಡುಗಡೆ ಮಾಡಲಾಗಿದ್ದು, ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.