ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಐದನೇ ದಿನಕ್ಕೆ ಕಾಲಿಟ್ಟಿದ್ದು, ಪುರಾತನ ಕಾಲದ ಮಡಿಕೆ ಪತ್ತೆಯಾಗಿದೆ. ಕೋಟೆ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ನಡೆಯುತ್ತಿರುವ ಈ ಕಾರ್ಯದಿಂದ ಪ್ರತಿದಿನವೂ ಪ್ರಾಚೀನ ಅವಶೇಷಗಳು ಹೊರಬರುತ್ತಿವೆ. ಇತಿಹಾಸಕಾರರು ಮತ್ತಷ್ಟು ಸಂಶೋಧನೆ ನಿರೀಕ್ಷಿಸಿದ್ದು, ಲಕ್ಕುಂಡಿಯ ಶ್ರೀಮಂತ ಕಲೆಗಳ ಇತಿಹಾಸ ಅನಾವರಣಗೊಳ್ಳುತ್ತಿದೆ. ಸಿಸಿಟಿವಿ ಕಣ್ಗಾವಲಿನಲ್ಲಿ ಉತ್ಖನನ ಮುಂದುವರೆದಿದೆ.