ರಸ್ತೆ ಬದಿ ಕಸ ಹಾಕುವವರನ್ನ ರೆಂಡ್ ಹ್ಯಾಂಡ್ ಆಗಿ ಹಿಡಿದ ಪುರಸಭೆ ಸಿಬ್ಬಂದಿ ಅವರನ್ನು ಸನ್ಮಾನಿಸಿ ಜಾಗೃತಿ ಮೂಡಿಸುರುವ ಪ್ರಸಂಗ ಆನೇಕಲ್ನಲ್ಲಿ ನಡೆದಿದೆ. ರಸ್ತೆ ಬದಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದು, ಕಸ ಹಾಕದಂತೆ ಬೋರ್ಡ್ ಹಾಕಿ ನಾಗರಿಕರಿಗೆ ಜಾಗೃತಿ ಮೂಡಿಸಲಾಗಿತ್ತು. ಹೀಗಿದ್ದರೂ ಹಲವರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವ ಕಾರಣ ವಿನೂತನ ಕಾರ್ಯಕ್ಕೆ ಪುರಸಭೆ ಮುಂದಾಗಿದೆ.