ಇಸ್ರೇಲ್ ಸರ್ಕಾರದ ಮಹತ್ವದ ಡೇಟಾಬೇಸ್ಗಳನ್ನು ಅನಾನಿಮಸ್ ಫಾರ್ ಜಸ್ಟೀಸ್ ಎಂಬ ಹ್ಯಾಕರ್ಸ್ ಗ್ರೂಪ್ ಹ್ಯಾಕ್ ಮಾಡಿದೆ. ಇಸ್ರೇಲ್ ಸೇನೆ, ಕಂದಾಯ ವಿಭಾಗ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಮತ್ತು ಫೋಟೋಗಳನ್ನು ಕಳವು ಮಾಡಲಾಗಿದೆ. ಇಸ್ರೇಲಿನ ಸೈಬರ್ ಭದ್ರತೆಗೆ ಬೆದರಿಕೆ ಹಾಕಿರುವ ಬಗ್ಗೆ ಹ್ಯಾಕರ್ಸ್ ಗುಂಪು ಮಾಹಿತಿ ನೀಡಿದೆ. ಈ ಸೈಬರ್ ದಾಳಿ ಇಸ್ರೇಲ್ನ ಭದ್ರತೆಗೆ ದೊಡ್ಡ ಸವಾಲಾಗಿದೆ.