ಟಿಬೆಟ್-ನೇಪಾಳದ ಗಡಿಯ ಬಳಿ ಚೀನಾ ನಿರ್ಮಿಸಿದ್ದ ಮತ್ತೊಂದು ಆಣೆಕಟ್ಟು ಕುಸಿದುಬಿದ್ದಿದೆ. ಇದು ಭೀಕರವಾದ ಎರಡನೇ ಹಠಾತ್ ಪ್ರವಾಹದ ಭೀತಿಯನ್ನು ಹುಟ್ಟುಹಾಕಿದೆ. ಭಯಭೀತರಾದ ಗ್ರಾಮಸ್ಥರು ಎತ್ತರದ ಪ್ರದೇಶಗಳಿಗೆ ಓಡಿಹೋಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಚೀನಾ ಜಿರಾಂಗ್ ಗಡಿ ಬಂದರನ್ನು ಖಾಲಿ ಮಾಡುತ್ತಿದೆ.