ಅಪ್ಪೆ ಸಾರು ಅಥವಾ ಅಪ್ಪೆ ಹುಳಿ ಬಗ್ಗೆ ಕೇಳಿರಬಹುದು. ಇದು ಮಲೆನಾಡು ಮತ್ತು ಕರಾವಳಿ ಭಾಗದ ಜನಪ್ರಿಯ ಮಾವಿನಕಾಯಿ ಖಾದ್ಯ. ಈ ಮಾವಿನ ಸೀಸನ್ ಮುಗಿಯುವುದರೊಳಗೆ ಇದನ್ನು ಮಾಡಿ ಸವಿಯಲೇಬೇಕು. ಇದೊಂದು ಬೇಸಿಗೆಯ ವಿಶೇಷ ಖಾದ್ಯ. ಅಲ್ಲದೆ ಇದು ಹಸಿ ಮಾವಿನಕಾಯಿಯಿಂದ ತಯಾರಿಸುವ ರುಚಿಕರವಾದ, ತಿಳಿಯಾದ ಸಾರು. ಇದು ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ. ಇದನ್ನು ಸುಲಭವಾಗಿ ಕರಾವಳಿಯ ಸ್ಟೈಲ್ ಅಲ್ಲಿ ಮಾಡುವ ವಿಧಾನವನ್ನು shimogakitchen.recipes ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.