ಸೇಬು ಹಣ್ಣು ಸಾಮಾನ್ಯವಾಗಿ ಎಲ್ಲರೂ ತಿನ್ನುವಂತಹ ಹಣ್ಣು. ಆದರೆ ಕೆಲವರಿಗೆ ಇದನ್ನು ಹಾಗೆಯೇ ತಿನ್ನುವುದಕ್ಕೆ ಇಷ್ಟವಾಗುವುದಿಲ್ಲ. ಹಾಗಾಗಿ ಇವುಗಳಿಂದ ತಯಾರಾಗುವ ರೆಸಿಪಿ ಟ್ರೈ ಮಾಡುತ್ತಾರೆ. ಅಂತವರು ಈ ಒಂದು ರೆಸಿಪಿಯನ್ನು ತಯಾರಿಸಬಹುದು. ಸೇಬು ಹಾಲು ಸೇರಿದಾಗ ಮ್ಯಾಜಿಕ್ ಆಗುವುದರಲ್ಲಿ ಸಂಶಯವೇ ಇಲ್ಲ. ಸುಲಭವಾಗಿ ಮಾಡಬಹುದಾಗಿದ್ದು, ಬಹಳ ಕ್ವಿಕ್ ಆಗಿ ತಯಾರಿಸಿ ಸವಿಯಬಹುದು. ಸಿಹಿಗೆ ಪದೇ ಪದೇ ಪಾಯಸ ಅಥವಾ ಜಾಮೂನ್ ಮಾಡುವ ಬದಲು ಈ ಒಂದು ರೆಸಿಪಿಯನ್ನು ಟ್ರೈ ಮಾಡಿ ನೋಡಿ. ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರೂ ಇದನ್ನು ಚಪ್ಪರಿಸಿ ತಿನ್ನುವುದರಲ್ಲಿ ಸಂಶಯವಿಲ್ಲ. ಹಾಗಿದ್ರೆ ಇನ್ನೇಕೆ ತಡ anusharjunn ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ರೆಸಿಪಿ ಟ್ರೈ ಮಾಡಿ.