ಅಸ್ಸಾಂನಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಮಧ್ಯೆ ನಡೆದ ರಕ್ಷಣಾ ಕಾರ್ಯಾಚರಣೆಯ ಅತ್ಯಂತ ಭಾವುಕ ಮತ್ತು ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಹದ ನೀರಿಗೆ ಸಿಲುಕಿದ್ದ ಪುಟ್ಟ ಕಂದಮ್ಮನನ್ನು ಭಾರತೀಯ ಯೋಧರು ಅತ್ಯಂತ ಕಾಳಜಿಯಿಂದ ರಕ್ಷಿಸಿರುವ ದೃಶ್ಯ ಪ್ರತಿಯೊಬ್ಬರ ಕಣ್ಣಂಚನ್ನು ಒದ್ದೆ ಮಾಡುವಂತಿದೆ.ರಕ್ಷಣಾ ಕಾರ್ಯಾಚರಣೆಯ ಆತಂಕದ ವಾತಾವರಣದಲ್ಲೂ ಗಾಢ ನಿದ್ರೆಯಲ್ಲಿದ್ದ ಮಗುವನ್ನು ಯೋಧರೊಬ್ಬರು ಅತ್ಯಂತ ಎಚ್ಚರಿಕೆ ಮತ್ತು ಪ್ರೀತಿಯಿಂದ ತಮ್ಮ ಕೈಗಳಲ್ಲಿ ಎತ್ತಿಕೊಂಡು, ಆಳವಾದ ನೀರನ್ನು ದಾಟಿ ಪ್ರವಾಹ ರಕ್ಷಣಾ ದೋಣಿಯತ್ತ ಕರೆತಂದರು. ಆ ಮಗುವಿನ ನಿದ್ರೆಗೆ ಭಂಗಬಾರದಂತೆ ಯೋಧ ತೋರಿದ ಕಾಳಜಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.