ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ವಿಚಾರ ಸಂಬಂಧ ಮಾತಿನ ವೇಳೆ ಮಧ್ಯಪ್ರವೇಶಿದ ಸಚಿವ ಲಕ್ಷ್ಮಣ್ ಸವದಿಗೆ ಕೈ ಮುಗಿದ ವಿಪಕ್ಷ ನಾಯಕ ಆರ್. ಅಶೋಕ್, ಬೆಳಗಾವಿಯರ ಸಹವಾಸವೇ ಬೇಡ ಎಂದ ಪ್ರಸಂಗ ನಡೆದಿದೆ. ವಿಪಕ್ಷ ನಾಯಕ ಅಶೋಕ್ ಈಗ ಇಂಪ್ರೂವ್ ಆಗಿದ್ದಾರೆ ಎಂದ ಸವದಿ, ನೀವೆಲ್ಲ 16 ಜನ ಒಟ್ಟಿಗೆ ಹೈದರಾಬಾದ್ ಗೆ ಹೋಗಿದ್ದನ್ನು ನೆನಪಿಸಿಕೊಳ್ಳಿ. ವಾಪಸ್ ಬರುವಾಗ ಹೊಡೆಸಿಕೊಂಡು ಬಂದ್ರಲ್ಲಾ ಅದನ್ನೂ ನೆನಪಿಸಿಕೊಳ್ಳಿ ಎಂದು ಕಾಲೆಳಿದಿದ್ದಾರೆ. ಇದಕ್ಕೆ ಕೌಂಟರ್ ನೀಡಿದ ಬಿಜೆಪಿಗರು ಅದರಲ್ಲಿ ಎ1 ನೀವೇ ಎಂದು ಸವದಿ ಅವರಿಗೆ ತಿಳಿಸಿದ್ದಾರೆ.