ಮೊಮೊಸ್ ಶಾಪ್ ಹುಡುಗನ ಮೇಲೆ ಪುಂಡನೋರ್ವ ರೌಡಿಸಂ ನಡೆಸಿರುವ ಘಟನೆ ಬೆಂಗಳೂರಿನ ಬೆಳ್ಳಂದೂರು ಗ್ರೀನ್ ಗ್ಲೇನ್ ಲೇಔಟ್ನಲ್ಲಿ ನಡೆದಿದೆ. ಬುಧವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬೈಕ್ನಲ್ಲಿ ಬಂದಿದ್ದ ಮೂವರಲ್ಲಿ ಓರ್ವ ಕೃತ್ಯ ಎಸಗಿದ್ದಾನೆ. ಶಾಪ್ ಹುಡುಗನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಶಾಪ್ ಕೂಡ ಧ್ವಂಸಗೊಳಿಸಲಾಗಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವ ಕಾರಣಕ್ಕೆ ಗಲಾಟೆ ಆಗಿದೆ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.