ಕೆ.ಆರ್.ಪುರದ ಉದಯ್ ವಿಕ್ರಂ ಎಂಬಾತ ಆಟೋದಲ್ಲಿ ಅಪಾಯಕಾರಿ ವೀಲಿಂಗ್ ಸ್ಟಂಟ್ಗಳನ್ನು ಮಾಡಿ, ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಸಂಚಾರಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಉದಯ್ ವಿಕ್ರಂ ವಿರುದ್ಧ ಪ್ರಕರಣ ದಾಖಲಿಸಿ, ಆತನ ಆಟೋವನ್ನು ಜಪ್ತಿ ಮಾಡಿದ್ದಾರೆ. ಸಾರ್ವಜನಿಕ ಸುರಕ್ಷತೆಗಾಗಿ ಇಂತಹ ಸ್ಟಂಟ್ಗಳಿಂದ ದೂರವಿರಲು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.