ಗುಂಡಿಗೆ ಬಿದ್ದು ಮರಿಯಾನೆಯೊಂದು ಪರದಾಟ ನಡೆಸಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ರಂಗಪ್ಪನದೊಡ್ಡಿ ಗ್ರಾಮದ ಬಳಿ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿ ಮೂಲಕ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಆನೆ ಮರಿ ರಕ್ಷಣೆ ಮಾಡಿದ್ದು, ಬೆಳಗ್ಗಿನ ಜಾವದ ವೇಳೆಗೆ ಮರಿಯಾನೆ ಮರಳಿ ತನ್ನ ಕುಟುಂಬ ಸೇರಿದೆ.