ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಳಂಬವಾಗಿದ್ದು, ಇಂದು ರಾತ್ರಿ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ. ಹೆಚ್.ವೈ. ಮೇಟಿ ಅವರ ಪುತ್ರಿ, ತಂದೆಯ ಪುಣ್ಯತಿಥಿ ದಿನದಂದೇ ತಮ್ಮ ಸಹೋದರರಾದ ಮಲ್ಲಣ್ಣ ಅಥವಾ ಉಮೇಶ್ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದರು. ಇದು ಅವರ ಹಕ್ಕು ಎಂದು ಹೇಳಿದ್ದಾರೆ.