ಬಾಗಲಕೋಟೆಯ ಹಳೆ ನಗರದಲ್ಲಿ ನಡೆದ ವಾರದ ಸಂತೆಗೆ ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ ಅವರು ಸಾಮಾನ್ಯರಂತೆ ಭೇಟಿ ನೀಡಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಹಳ್ಳಿಗಳಿಂದ ಬಂದಿದ್ದ ರೈತರಿಂದ ತಮಗೆ ಬೇಕಾದ ಅಗತ್ಯ ತರಕಾರಿ ಹಾಗೂ ಹಣ್ಣುಗಳನ್ನು ಖುದ್ದಾಗಿ ಖರೀದಿಸಿದ ಸಂಸದರ ಈ ಸರಳ ನಡೆಗೆ ಸ್ಥಳೀಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.