ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಸಮೀಪದ ಅಸ್ಕಿ ಗ್ರಾಮದಲ್ಲಿ ಪ್ರೇಮಿಗಳಾದ ಪವಿತ್ರಾ (19) ಮತ್ತು ಕಾರ್ತಿಕ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ವರದಿಯಾಗಿದೆ. ಇಬ್ಬರ ನಡುವೆ ಉಂಟಾದ ವೈಮನಸ್ಸು ಜಗಳಕ್ಕೆ ಕಾರಣವಾಗಿದ್ದು, ಮನನೊಂದು ಪವಿತ್ರಾ ಬನಹಟ್ಟಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಿಯತಮೆ ಸಾವಿನ ವಿಷಯ ತಿಳಿದ ಕಾರ್ತಿಕ್ ಸಹ ಅಸ್ಕಿ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾರೆ. ಬನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.