ಬಾಳೆಹಣ್ಣಿನ ಕಡುಬು (Balehannu Kadubu) ದಕ್ಷಿಣ ಭಾರತದ, ಅದರಲ್ಲೂ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸು. ನೆನೆಸಿದ ಅಕ್ಕಿ, ಹಣ್ಣಾದ ಬಾಳೆಹಣ್ಣು, ಬೆಲ್ಲ, ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಬಳಸಿ ದಪ್ಪನೆಯ ಮಿಶ್ರಣ ತಯಾರಿಸಿ, ಬಾಳೆ ಎಲೆಯಲ್ಲಿ ಸುತ್ತಿ ಹಬೆಯಲ್ಲಿ (Steamed) ಬೇಯಿಸಿ ಇದನ್ನು ತಯಾರಿಸಲಾಗುತ್ತದೆ. ಇದು ಅತ್ಯಂತ ಸ್ವಾದಿಷ್ಟ ಮತ್ತು ಆರೋಗ್ಯಕರ ಉಪಾಹಾರವಾಗಿದೆ. ಮನೆಯಲ್ಲಿ ಬಾಳೆಹಣ್ಣಿದ್ದು ಯಾರು ತಿನ್ನದಿದ್ದರೆ ಈ ರೆಸಿಪಿಯನ್ನು ಖಂಡಿತವಾಗಿಯೂ ಮಾಡಿ. ಮತ್ತೆ ಮತ್ತೆ ಮಾಡಿ ತಿನ್ನುವುದರಲ್ಲಿ ಸಂಶಯವೇ ಇಲ್ಲ. ಇದನ್ನು ಮಾಡುವ ವಿಧಾನವನ್ನು finefettlecookerys ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.