ಬ್ಯಾನರ್ ಗಲಾಟೆಗೆ ಪ್ರಕರಣ ಸಂಬಂಧ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣ ವಿಚಾರವೀಗ ರಾಜಕೀಯ ಚಟಾಪಟಿಗೆ ಕಾರಣವಾಗಿದೆ. ಜನಾರ್ದನ ರೆಡ್ಡಿಯತ್ತ ಶಾಸಕ ಭರತ್ ರೆಡ್ಡಿ ಬೊಟ್ಟು ಮಾಡಿದ್ರೆ, ಇದು ನನ್ನ ಕೊಲ್ಲಲು ಮಾಡಿದ ಯತ್ನ ಎಂದು ಗಣಿದಣಿ ಆರೋಪಿಸಿದ್ದಾರೆ. ಈ ನಡುವೆ ಬಳ್ಳಾರಿಯ ಅಹಂಭಾವಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ನಿವಾಸಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದು, ಗಲಾಟೆ ಬಗ್ಗೆ ಮಾಹಿತಿ ಪಡೆದಿದ್ದಾರೆ.