ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಅಡುಗೆ ಸಿಲಿಂಡರ್ಗಳ ತೀವ್ರ ಕೊರತೆ ಎದುರಾಗಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಾರತ್ ಗ್ಯಾಸ್ ಏಜೆನ್ಸಿ ಮುಂದೆ ಜನರು ಸಿಲಿಂಡರ್ಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಸಿಲಿಂಡರ್ ಪಡೆಯಲು ನೂಕು ನುಗ್ಗಲು ನಡೆಯುತ್ತಿದ್ದು, ಜನರು ದುಬಾರಿ ಬೆಲೆ ತೆತ್ತಾದರೂ ಸಿಲಿಂಡರ್ ಸಿಕ್ಕರೆ ಸಾಕು ಎನ್ನುವ ಸ್ಥಿತಿ ತಲುಪಿದ್ದಾರೆ.