ಬಾಳೆಹಣ್ಣಿನ ದೋಸೆ (ಸಿಹಿ ದೋಸೆ) ಕೇವಲ 10-15 ನಿಮಿಷಗಳಲ್ಲಿ ತಯಾರಿಸಬಹುದಾದ ರುಚಿಕರವಾದ ದಕ್ಷಿಣ ಭಾರತದ ಉಪಹಾರವಾಗಿದೆ. ಕಳಿತ ಬಾಳೆಹಣ್ಣು, ಅಕ್ಕಿ ಹಿಟ್ಟು/ರವೆ, ಬೆಲ್ಲ, ಏಲಕ್ಕಿ ಮತ್ತು ತುರಿದ ತೆಂಗಿನಕಾಯಿಯನ್ನು ಬಳಸಿ ಈ ಮೃದುವಾದ ದೋಸೆಯನ್ನು ತಯಾರಿಸಲಾಗುತ್ತದೆ, ಇದು ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಬಾಳೆಹಣ್ಣು ಮನೆಯಲ್ಲಿದ್ದಾಗ ಅದರಿಂದ ಯಾವ ರೀತಿಯ ರೆಸಿಪಿ ಮಾಡಬಹುದು ಎಂಬ ಚಿಂತೆ ಇದ್ದರೆ ಈ ಒಂದು ರೆಸಿಪಿಯನ್ನು ನೀವು ಟ್ರೈ ಮಾಡಲೇಬೇಕು. ಸುಲಭವಾಗಿ ತಯಾರಿಸಬಹುದಾದ ರೆಸಿಪಿ ಆದ್ದರಿಂದ ಯಾವುದೇ ರೀತಿಯ ತೊಂದರೆ ಇಲ್ಲದೆ ಮಾಡಿ ಸವಿಯಬಹುದಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ಈ ರೆಸಿಪಿಯನ್ನು shashisadukkala47 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.