ಸಾಮಾನ್ಯವಾಗಿ ಬಾಣಂತಿ ಮನೆಯಲ್ಲಿದ್ದರೆ ಅವರಿಗೆ ಯಾವ ರೀತಿ ತಿನಿಸುಗಳನ್ನು ಮಾಡಿಕೊಡುವುದು ಎಂಬುದೇ ತಿಳಿಯುವುದಿಲ್ಲ. ನಿಮ್ಮ ಮನೆಯಲ್ಲಿಯೂ ಬಾಣಂತಿ ಇದ್ದರೆ ನೀವು ಈ ಕೊಬ್ಬರಿ ಉಂಡಿ ರೆಸಿಪಿಯನ್ನು ಮಾಡಿ ಕೊಡಬಹುದು. ಇದು ಆರೋಗ್ಯ ವೃದ್ಧಿಗೆ, ಬೆನ್ನುನೋವು ಕಡಿಮೆ ಮಾಡಲು ಮತ್ತು ಶಕ್ತಿ ನೀಡಲು ಸಹಾಯ ಮಾಡುತ್ತದೆ. ಒಣ ಕೊಬ್ಬರಿ, ಬೆಲ್ಲ, ಅಂಟು, ಗಸಗಸೆ, ಒಣಶುಂಠಿ ಮತ್ತು ಬಾಣಂತಿ ಮಸಾಲೆ (ಇಪ್ಲಿ ಮುಡಿ, ಜಾಜಿಕಾಯಿ) ಬಳಸಿ ತಯಾರಿಸುವ ಸಾಂಪ್ರದಾಯಿಕ ಕೊಬ್ಬರಿ ಉಂಡೆ ಅತ್ಯುತ್ತಮ ಆಹಾರ. ಜೊತೆಗೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಗರ್ಭಕೋಶದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ.