ಬನಶಂಕರಿ ಜಂಕ್ಷನ್ನಲ್ಲಿ ರಸ್ತೆ ದಾಟಲು ಸಾರ್ವಜನಿಕರು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಜನರ ಕಷ್ಟವನ್ನು ಆಲಿಸಿ, ಸ್ಕೈವಾಕ್ನ ಅಗತ್ಯತೆಯ ಬಗ್ಗೆ ಪ್ರಶ್ನಿಸಿದರು. ಹಿಂದೆ ಭೂಮಿಪೂಜೆ ಮಾಡಿದ್ದರೂ ಯೋಜನೆ ಕೈಬಿಟ್ಟಿದ್ದು, ಸ್ಕೈವಾಕ್ ನಿರ್ಮಾಣಕ್ಕೆ ಜನರು ಆಗ್ರಹಿಸಿದ್ದಾರೆ. ರಸ್ತೆ ದಾಟುವಾಗ ಅಜ್ಜಿ ಒಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆಯನ್ನು ಮಹಿಳೆಯರು ನೆನಪಿಸಿಕೊಂಡರು.